ಬಳ್ಳಾರಿಯಲ್ಲಿ ನಾಳೆ(ಫೆ.8) ಹಿರಿಯ ಸಾಹಿತಿ ಟಿ.ಕೆ. ಗಂಗಾಧರ ಪತ್ತಾರ ಅವರ ‘ಕನ್ನಡಕೆ ಬೆಳಕಿತ್ತ ಪಶ್ಚಿಮದ ಹಣತೆಗಳು’ ಕೃತಿ ಲೋಕಾರ್ಪಣೆ

ಬಳ್ಳಾರಿ, ಫೆ.7: ನಗರದ ಹಿರಿಯ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ ಅವರು ರಚಿಸಿರುವ ‘ಕನ್ನಡಕೆ ಬೆಳಕಿತ್ತ ಪಶ್ಚಿಮದ ಹಣತೆಗಳು’ ಕೃತಿ ಲೋಕಾರ್ಪಣೆ ಸಮಾರಂಭ ಫೆ.8 ರಂದು ಭಾನುವಾರ ಬೆ.10 ಗಂಟೆಗೆ ಸ್ಥಳೀಯ ಸಾಂಸ್ಕೃತಿಕ ಸಮುಚ್ಚಯ ಆವರಣದಲ್ಲಿರುವ ಕನ್ನಡ ಭವನದಲ್ಲಿ ಜರುಗಲಿದೆ.
ನಗರದ ಸವಿಗಂಗಾ ಪ್ರಕಾಶನ ಪ್ರಕಟಿಸಿರುವ ‘ಕನ್ನಡಕೆ ಬೆಳಕಿತ್ತ ಪಶ್ಚಿಮದ ಪಣತೆಗಳು’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಸಿ.ಬಿ. ಚಿಲ್ಕರಾಗಿ ಅವರು ಲೋಕಾರ್ಪಣೆಗೊಳಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಚಿಂತಕ,
ಲೋಹಿಯಾ ಪ್ರಕಾಶನದ ಸಿ. ಚೆನ್ನಬಸವಣ್ಣ ಅವರು ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಅವರು ಕಾರ್ಯಕ್ರಮ‌ ಉದ್ಘಾಟಿಸುವರು.
ಶರಣ ಸಾಹಿತ್ಯ ಪರಿಷತ್ತು ಮಾಜಿ ಜಿಲ್ಲಾಧ್ಯಕ್ಷ, ಲೇಖಕ ಕೆ. ಬಿ. ಸಿದ್ಧಲಿಂಗಪ್ಪ ಅವರು ಕೃತಿಯನ್ನು ಪರಿಚಯಿಸುವರು. ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನೇತ್ರ ಭಂಡಾರದ ವೈದ್ಯಕೀಯ ನಿರ್ದೇಶಕ ಡಾ. ಪರಸಪ್ಪ ಬಂದ್ರಕಳ್ಳಿ ಅವರು ಕೃತಿ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸುವರು.


ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಸ್ಥಾಪಕಾಧ್ಯಕ್ಷರೂ ಆಗಿರುವ ಕೆಪಿಟಿಸಿಎಲ್ ನ ನಿವೃತ್ತ ಎಇಇ
ಭೀಮಸೇನ ಬಡಿಗೇರ,  ನಗರದ ವಿಶ್ವಕರ್ಮ ವಿಕಾಸ ವೇದಿಕೆ ಅಧ್ಯಕ್ಷಚಂದ್ರಕಾಂತ ಸೋನಾರ, ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ  ಡಾ. ಬಿ.ಜಿ. ಕಲಾವತಿ,  ಕುಕನೂರು ವಿದ್ಯಾನಂದ ಗುರುಕುಲ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಕೃಷ್ಣ ರಾವ್ ಆರ್. ಕುಲಕರ್ಣಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಬಳ್ಳಾರಿಯ ಕಿಷ್ಕಿಂಧಾ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ, ಡೀನ್ ಡಾ. ಎಸ್.ಮಂಜುನಾಥ ಅವರು ಕಾರ್ಯಕ್ರಮ ನಿರ್ವಹಿಸುವರು.
ನಗರದ ವೀ.ವಿ.ಸಂಘದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ
ಎ.ಎಂ.ಪಿ.ವೀರೇಶಸ್ವಾಮಿ ಅವರು ನಿರೂಪಿಸುವರು.


ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ನಿವೃತ್ತಾಧಿಕಾರಿ, ವಿಚಾರವಾದಿ ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ, ಲೇಖಕ ಕಲ್ಬುರ್ಗಿಯ ದತ್ತಾತ್ರೇಯ ವಿಶ್ವಕರ್ಮ, ಸಂಗೀತ ವಿದುಷಿ ಶ್ರೀಮತಿ ಸುಧಾ ಮಂಜುನಾಥ, ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ,  ಹೂವಿನ ಹಡಗಲಿಯ ವಿಶ್ರಾಂತ ಮುಖ್ಯಗುರು ರವಿಂದ್ರ ವೀ ಕಮ್ಮಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಡಾ|| ಶಿವಲಿಂಗಪ್ಪ ಹಂದಿಹಾಳು, ಕಸಾಪ ಗೌರವ ಕೋಶಾಧ್ಯಕ್ಷ ಡಾ. ಬಸವರಾಜ ಗದಗಿನ, ಸನ್ಮಾರ್ಗ ಗೆಳಯರ ಬಳಗದ  ಬಿ.ಚಂದ್ರಶೇಖರ್ ಆಚಾರ್, ಜಾನಪದ ತಜ್ಞರಾದ ಡಾ.ಎ.ಎನ್.ಸಿದ್ದೇಶ್ವರಿ,
ವೀರಶೈವ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಭ್ರಮರಾಂಬ, ಕ್ರಿಯಾಶೀಲ ರಂಗಭೂಮಿ ಕಲಾವಿದ, ಪತ್ರಿಕಾ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳ್,
ಬಳ್ಳಾರಿ ಮೆಡಿಕಲ್ ಕಾಲೇಜಿನ ಪ್ರಯೋಗಾಲಯ ತಂತ್ರಜ್ಞ ವಿ.ಬಿ.ಕೃಷ್ಣಾಚಾರ್,  ನಗರದ ಪುನರುಜ್ಜೀವನ ಅಧ್ಯಯನ ಕೇಂದ್ರದ ಶ್ರೀನಾಥ ಜೋಶಿ, ಗ್ರಂಥಪಾಲಕ ನವೀನ್ ಗಾಂಧಿ, ಕತೆಗಾರ ಮೋಕಾದ ಭುವನೇಶ್ ಕುಂಬಾರ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಸಾಹಿತ್ಯಾಸಕ್ತರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸವಿಗಂಗಾ ಪ್ರಕಾಶನದ
ಟಿ. ಜಿ. ಕವಿತಾ, ಟಿ. ಜಿ. ನಾಗಚಂದ್ರ ಪತ್ತಾರ, ಟಿ. ಜಿ. ಕೀರ್ತಿಚಂದ್ರ ಪತ್ತಾರ ಅವರು ಕೋರಿದ್ದಾರೆ.