ಅನುದಿನ ಕವನ-೧೦೮೯, ಹಿರಿಯ ಕವಿಯಿತ್ರಿ:ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಏಸು ಬಂದ

ಏಸು ಬಂದ ಏಸು ಬಂದ ನಮ್ಮೂರಿಗೆ ಉದ್ದನೆಯ ನಿಲುವಂಗಿ ನೀಳಗೂದಲು ನಿಡಿದಾದ ಗಡ್ಡ ಬಾಗಿದ ಮೀಸೆ , ಕಂದುಗಣ್ಣು ಹೆಗಲಿಗೆ ಕಂಬಳಿ ಬಗಲಿಗೆ ಕುರಿಮರಿ ಕೈಗೋಲು ಬೀಸುತ್ತಾ ಊರ ತುಂಬಾ ಓಡಾಡಿದ ಅಂಗಾಲು, ಕೈಗಳಿಗೆ ಜಡಿದ ಮೊಳೆಗಳೆಲ್ಲಿ? ಒಸರಿದ ರಕ್ತವೆಲ್ಲಿ ?…

ಅನುದಿನ ಕವನ-೧೦೮೮, ಕವಿಯತ್ರಿ: ರಂಹೊ, ತುಮಕೂರು

ಅವರು ಸುರಿದ ಕೆಂಡ ಕಂದೀಲಾಯ್ತು! ಎಸೆದ ಮುಳ್ಳು ಎಚ್ಚರಿಕೆಯಾಯ್ತು! ಹಚ್ಚಿದ ಕಿಚ್ಚು ಆತ್ಮ ವಿಶ್ವಾಸವಾಯ್ತು! ತೂರಿದ ಕಲ್ಲುಗಳೆಲ್ಲ ಮೆಟ್ಟಿಲುಗಳಾದವು! ಎಸೆದ ಮಾತುಗಳೆಲ್ಲ ಹೊಸ ಹಾಡುಗಳಾದವು! ಮತ್ತೇನು ಪ್ರೀತಿ ಮತ್ತು ಮೌನ ಜೀವ ಚೈತನ್ಯವಾದವು! -ರಂಹೊ(ರಂಗಮ್ಮ ಹೊದೆಕಲ್), ತುಮಕೂರು —–

ಅನುದಿನ‌ ಕವನ-೧೦೮೭, ಕವಿ: ಮಂಜುನಾಥ ಕಾಡಜ್ಜಿ, ಕಮಲಾಪುರ, ಕವನದ ಶೀರ್ಷಿಕೆ: ಕಾಯಕ ಸಂತ-ರೈತ

ಕಾಯಕ ಸಂತ- ರೈತ ನಿತ್ಯವು ದುಡಿಯುತ ಕಾಯವ ದಣಿಸಿ ಬೆವರಲಿ ಭಕ್ತಿಯ ಮಳೆಯ ಸುರಿಸಿ ರಟ್ಟೆಯ‌ ಶಕ್ತಿಯ ಧರಣಿಗೆ ಸವೆಸಿ ಮೇಘನ ನಂಬಿ ಬೀಜವ ಹಾಕಿಸಿ ಬಿಸಿಲು ಮಳೆಗೆ ದೇಹವ ದಂಡಿಸಿ ಚಳಿಗಾಳಿಗೆ ಬೆದರದೆ ಮೈಯನು ತಾಗಿಸಿ ಚಿಗುರಿದ ಸಸಿಯ ಜತನವ…

ಅನುದಿನ ಕವನ-೧೦೮೬, ಕವಿ: ಡಾ. ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ:ನನ್ನ ಪ್ರಿಯ ತುಂಗಭದ್ರೆಯೇ!

ನನ್ನ ಪ್ರಿಯ ತುಂಗಭದ್ರೆಯೇ! ಪ್ರಿಯ ತುಂಗಭದ್ರೆಯೇ ಹರಿವ ನಿನ್ನೊಡಲೊಳಗೆ ಇಳಿದ ಕಂದಮ್ಮರಿಗೆ ಯಾವ ಮುತ್ತು ರತ್ನಗಳ ನೀಡಿದೆ ಬೇಡುವ ಭಕ್ತರ ಆಕಾಶಕ್ಕೆ ಏಣಿ ಹಾಕುವವರ ಮಡಿಗೊಂಡವರ ಕಣ್ಣಿಗಿಳಿದೆಯಾ ತಾಯಿ ಒಡಲೇ ಕಲ್ಲಾದವರ ಲಯವಾದವರ ಕೋಟೆ ಪರ್ವತವಾದವರ ದನಿಗೆ ಇಂಬಾದೆಯಾ… ನಿನ್ನ ಸಿಹಿ…

ಅನುದಿನ ಕವನ-೧೦೮೫, ಕವಿ: ಅಕ್ಕಿ‌ ಬಸವೇಶ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ: ನಾವು ಕಾಯುತ್ತಿದ್ದೆವೆ….

ರಾಜ್ಯದ 430 ಸರಕಾರಿ ಪ್ರಥಮದರ್ಜೆ ಕಾಲೇಜುಗಳ 10600 ಅತಿಥಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಯಾಗಿರುವ ‘ಸೇವಾ ಖಾಯಮಾತಿ’ಗಾಗಿ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ತಿಂಗಳತ್ತ ಸಾಗಿದೆ. ಈ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ಆಗಿರುವ ಕವಿ ಅಕ್ಕಿ ಬಸವೇಶ ಅವರು ಕವಿತೆ ಮೂಲಕ…

ಅನುದಿನ ಕವನ-೧೦೮೪, ಕವಿ: ಬಸೂ, ಗದಗ, ಕವನದ ಶೀರ್ಷಿಕೆ: ಅವ್ವ

ಅವ್ವ ಸುಡು ಬಿಸಿಲಿನ ಟಾಯರನ್ನೇ ಕಾಲಿಗೆ ಚಪ್ಪಲಿಯಾಗಿಸಿ ಅಡವಿ ಅಪ್ಪನಿಗೆ ಬುತ್ತಿ ಒಯ್ವಳು ಅವ್ವ ಹುರುಪಳಿಸುವ ಹುಡಿ ಮಣ್ಣ ಹಾಯ್ದು ಬಗಲಕೂಸಿಗೆ ಹೊಡಮರಳಿ ಹಾಲೂಡಿಸಿದವಳು ಅವ್ವ ಪಿಸಿದ ಸೀರೆಯನ್ನೇ ತಿರುತಿರುಗಿ ದಿಂಡು ಹಾಕುತ ಬದುಕ ಚಳಿಗೆ ಕೌದಿಯಾದವಳು ಅವ್ವ ತಿರಸೆಟ್ಟಿ ಗಂಡನ…

ಅನುದಿನ ಕವನ-೧೦೮೩, ಕವಿಯಿತ್ರಿ: ಭುವನಾ ಹಿರೇಮಠ, ಕಿತ್ತೂರು, ಕವನದ ಶೀರ್ಷಿಕೆ: ಗಾಂಧಿ ಟೋಪಿ

ಗಾಂಧಿ ಟೋಪಿ ಗಾಂಧೀಜಿ ಅಂದರೆ ಕಾಗದದ ದೋಣಿಯಂಥ ಒಂದು ಬಿಳಿ ಟೊಪ್ಪಿಗೆ ಅಪ್ಪ ಅಜ್ಜ ಮಾವ ಮತ್ತು ಮಾಸ್ತರರ ತಲೆಯ ಮೇಲಿರುತ್ತಿದ್ದ ನಮ್ಮ ಗಾಂಧೀಜಿ ಬಡ ಮುದುಕಿಯ ಪಾಡು ನೋಡಿ ಅಂಗಿ ತೊರೆದ ಗಾಂಧೀಜಿ, ಒಂದೇ ಧೋತರ ತಿರುವಿ ಮುರುವಿ ಉಟ್ಟು…

ಅನುದಿನ ಕವನ-೧೦೮೨, ಕವಿ: ಟಿಪಿ ಉಮೇಶ್, ಹೊಳಲ್ಕೆರೆ

ಹೂಗಳ ರಾಶಿಯಾದರೆ; ಪೋಣಿಸುವ ದಾರವಾಗುವೆ! ಹರಿಯುವ ಜಲವಾದರೆ; ಗುರಿ ಸೇರಿಸುವ ತೀರವಾಗುವೆ! ಬೀಸುವ ವಾಯುವಾದರೆ; ಮೈಮರೆತು ಪುಳಕಗೊಳ್ಳುವೆ! ಮಣ್ಣಿನ ಕಣಗಳಾದರೆ; ಚಿಗುರಾಗುತ ಉಸಿರಾಗುವೆ! ಬೆಳಕಿನ ಪುಂಜವಾದರೆ; ಪ್ರಕಾಶಿಸುವ ತರಂಗವಾಗುವೆ! ಹಕ್ಕಿಗಳ ಧ್ವನಿಯಾದರೆ; ಸ್ವರಸಂಗೀತದಿ ಝೇಂಕರಿಸುವೆ! ಗಗನದಿ ಬಣ್ಣಗಳಾದರೆ; ಕಾಮನಬಿಲ್ಲಿನಲಿ ರಂಗೇರುವೆ! ಕವಿತೆಯಲ್ಲಿ…

ಅನುದಿನ ಕವನ-೧೦೮೧, ಕವಿಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಪಾರ್ಶ್ವಗಳ ಎಣಿಕೆ

ಪಾರ್ಶ್ವಗಳ ಎಣಿಕೆ ಮುಖದ ಗಂಟು ಬಿಗಿದು ಸಡಿಲಿಸಿ ಅತ್ತ ಇತ್ತೊಮ್ಮೆಓರೆನೋಟ ಬೀರುತ್ತ ಕೈಬೆರಳು ಮಡಿಚಿ ಬಿಚ್ಚುತ್ತ ತಲೆ ಕೆರೆದು ಯಾವ ಪರಿವೆ ಇಲ್ಲದಂತೆ ಕುಳಿತು ಎದ್ದು ಗೂಢ ಲೆಕ್ಕಾಚಾರದಿ ಮುಳುಗಿತ್ತು ಮನವೊಮ್ಮೆ ಕಣ್ಣು ಕಿರಿದು ಮಾಡಿ ನೋಡ್ತಿತ್ತು ಬುದ್ಧಿ ಅಗಣಿತ ಗಣಿತದ…

ಅನುದಿನ ಕವನ-೧೦೮೦, ಕವಿ: ಮೆಳೇಕಲ್ಲಳ್ಳಿ ಉದಯ, ತುಮಕೂರು, ಕವನದ ಶೀರ್ಷಿಕೆ: ಪ್ರೀತಿ

ಪ್ರೀತಿ ದಿನವೂ ನಿನ್ನ ಕಣ್ಣೊಳಗೆ ಕಳೆದು ಹುಬ್ಬುಗಳಿಗೆ ತುಟಿಯಿಡುವ ಕನಸು. ನೀನು ರೆಂಬೆ.ಕೊಂಬೆಯಲಿ ಕೊನರಿದ. ಚೈತ್ರದ ಅರಳುಗಣ್ಣು. ಪ್ರೀತಿ ಗೆಳತಿ ಈಗ ಎಷ್ಟೂಂದು ಬೆಳೆದಿದ್ದೇವೆ. ಕಾಲದ ಕುರೂಪದಲಿ_ಮಸಗಿ ಮಸಣವಾಗಿದ್ದೇವೆ. ಚುಂಬಿಸ ಹೊರಟಿದ್ದೇವೆ ಸಾವು ಅದರೊಳಗಿನ ನೋವು. ಈ ಬದುಕು ಕೋಳಿ ಕೆದರಿದ…