ನೀ ಮುಟ್ಟದ ಮಲ್ಲಿಗೆ ನನ್ನ ಮುಡಿಗೇಕೆ ಇನಿಯಾ…!? ನಾ ನಿನ್ನ ಬಯಸಲು ನನಗೆ ಅಂತಹ ಮಹಾಕಾರಣವೇನು ಇರಲಿಲ್ಲ ಯಾರಲ್ಲೂ ಇರದ ಒಂದು ಅಪರೂಪದ ಗುಣ ನಿನ್ನಲ್ಲಿತ್ತು ಅಷ್ಟೇ ನನಗೆ ಸಾಕಿತ್ತು ಊರಿಗೆ ನೂರಾರು ದೊರೆಗಳಿದ್ದರೂ ನನ್ನ ಪಾಲಿಗೆ ನೀ ದೊರೆಯಷ್ಟೆ ಅಲ್ಲ…
Category: ಅನುದಿನ ಕವನ
ಅನುದಿನ ಕವನ-೬೮೬, ಕವಿ: ಎಲ್ವಿ(ಡಾ.ಲಕ್ಷ್ಮಣ ವಿ.ಎ) , ಬೆಂಗಳೂರು
ನಿನ್ನೆ ರಾತ್ರಿ ಅವ್ವ ಬಂದಿದ್ದಳು ಕನಸಿಗೆ ಎಂದಿನಂತೆ ಬೆಂಗಳೂರಿನಲಿ ನಾನು ಕಟ್ಟಿಸಿದ ಮನೆಗೆ ಮೊಟ್ಟ ಮೊದಲ ಬಾರಿ ಮೆಟ್ಟಿಲು ಹತ್ತಲಾಗದೆ ಒಳ ಮನೆಗೂ ಬರದೆ ವಾಪಸಾಗಿ ಬಿಟ್ಟಳು ಅದೇ ಮಾಸಲು ಸೀರೆ ಎಂದೆಂದಿಗೂ ಮುಗುಳು ಮಾಸದ ಮೋರೆ ಥಟ್ಟನೆ ಎಚ್ಚರವಾಯಿತು ದಾರಿ…
ಅನುದಿನ ಕವನ-೬೮೫, ಕವಯತ್ರಿ: ಶೀಲಾ ಅರಕಲಗೂಡು, ಕವನದ ಶೀರ್ಷಿಕೆ:ಬಣ್ಣ ಬಯಲು
ಬಣ್ಣ ಬಯಲು ತುಂಬ ಬೇಕು ಬಹಳಷ್ಟನ್ನು ನೋಡಿದೆಡೆಯಲ್ಲೆಲ್ಲಾ ಖಾಲಿ ಖಾಲಿ ಅಲ್ಲಿ ನಿಂತೆ ಇಲ್ಲಿ ಕುಳಿತೆ ಮಾಡಿದ್ದು ಬರೀ ಚಿಂತೆ ಕೃಷಿಯ ಮಾಡದಿರೆ ಹಸಿರು ಬೆಳೆಯುವುದೆಂತು? ಭಿತ್ತಿಯೇ ಇಲ್ಲದಿರೆ ಚಿತ್ರ ಮೂಡುವುದೆಂತು? ಬೀಜ ಸಾಕಷ್ಟಿಹುದು ಬಿತ್ತಬಾರದೇನು? ಬಣ್ಣಗಳ ರಾಶಿಯಿದೆ ಬಳಸಬೇಕವನು ಕಲ್ಲುಗಳ…
ಅನುದಿನ ಕವನ-೬೮೪, ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ತಾಯಿ(ಮುಕ್ತಕಗಳು)
ತಾಯಿ ಮನೆಯಲ್ಲಿ ಮಗುವಿರಲು ಸಂತಸವು ತುಂಬಿರಲು ದಿನವುರುಳಿ ನಗುನಗುತ ಚಿಂತೆಮರೆತು ಮನದಲ್ಲಿ ಉಲ್ಲಾಸ ಮಗುವಿನಾ ತುಂಟಾಟ ಮನೆಯಲ್ಲ ಕಳೆಹೊಂದಿ-ಧರಣಿದೇವಿ|| ಮಗುವನ್ನು ನೋಡುತಲಿ ಮಮತೆಯನು ತೋರುತಲಿ ಸೊಗಸಾದ ಅನುಭವವ ತಾಯಿಪಡೆದು ಮಿಗಿಲಿಲ್ಲ ಕಂದನಿಗೆ ಪ್ರಪಂಚ ನೀನೆನುತ ಮುಗಿಲನ್ನೆಮುಟ್ಟಿರಲುಧರಣಿದೇವಿ|| ತಾಯ್ತನದ ಸುಖವದುವೆ ಹೆಣ್ಣಿನಲಿ ಮನೆಮಾಡಿ…
ಅನುದಿನ ಕವನ-೬೮೩, ಕವಿ:ಎ.ಎನ್ ರಮೇಶ್ ಗುಬ್ಬಿ, ಕೈಗಾ-ಕಾರವಾರ, ಕವನದ ಶೀರ್ಷಿಕೆ:ಕಳೆದುಹೋದ ಕಳೆ
“ಮಕ್ಕಳ ದಿನಾಚಾರಣೆಯ ಹಾರ್ದಿಕ ಶುಭಕಾಮನೆಗಳೊಂದಿಗೆ….. ಬಾಲ್ಯದ ಬದುಕಿನ ರಿಂಗಣಗಳ ಕವಿತೆ.. ಒಪ್ಪಿಸಿಕೊಳ್ಳಿ..” ಇಲ್ಲಿ ಅಂದಿನ ದಿನಗಳ ನೆನಪಿನೋಕಳಿಯ ಸಂಭ್ರಮವಿದೆ. ಹಾಗೇ…
ಅನುದಿನ ಕವನ-೬೮೨, ಕವಯತ್ರಿ: ವಿ ನಿಶಾಗೋಪಿನಾಥ್, ಬೆಂಗಳೂರು, ಕವನದ ಶೀರ್ಷಿಕೆ: ಬೊಗಸೆಯಲ್ಲಿ ನಕ್ಷತ್ರ
ಬೊಗಸೆಯಲ್ಲಿ ನಕ್ಷತ್ರ ನನ್ನ ಬಡತನದ ದಿನಗಳನು ಪ್ರೇಮಿಸುವ ನಾನು ನೋವಿನಲ್ಲಿ ಕರಗುವುದನು ಕಲಿತಿರುವವಳು ಒದ್ದೆ ಕಣ್ಣೀರಿನಲಿ ಅಡಗಿ ಕುಳಿತ ದಿನಗಳು ನೆನಪಾಗುವುವು ದಾರಿ ತೋರಿ ಕೈಹಿಡಿದು ನಡೆಸುವುವು ಅಮ್ಮನ ಜೊತೆ ಬಾವಿ ನೀರು ಸೇದಿ ಅಂಗೈಯಲ್ಲಿ ಬೊಬ್ಬೆಗಳೆದ್ದುದಿದೆ ಬೆಂಕಿ ಒಲೆಗೆ ಮುಖದ…
ಅನುದಿನ ಕವನ-೬೮೧, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ
ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ, ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ. ಬನ್ನಿ ಗೊಂಬೆಗಳೆ ಆಟ ಆಡುಮಾ, ಹಟ್ಟಿಲಿ ಹಿಟ್ಟಿಲ್ಲ ಗಂಜಿಯಿಲ್ಲ, ಬನ್ನಿ ಗೊಂಬೆಗಳೆ ನಿಮ್ಮ ನೋಡ್ತಾ ಕುಂತಕಮಾ. ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ, ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ. ಬನ್ನಿ ಗೊಂಬೆಗಳೆ ನಾಮ್…
ಅನುದಿನ ಕವನ-೬೮೦, ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಕನಕನ ಸ್ವಗತ
ಕನಕನ ಸ್ವಗತ ಖಡ್ಗದ ಮೊನೆಯ ಇಳಿಸಿದಂದೇ ನಿನ್ನ ಹುಡುಕಿದೆ ಕೇಶವ ಹುಡುಕಾಟದೊಳಗೇ ‘ನೀ’ ಅವಿತಿದ್ದೆಯೆಂದು ‘ನಾ’ ಅರಿದಂದು ‘ನೀ’ ತೋರಿದೆ ಅಂದು ಕೇಶವ ! ಸಕಲ ಜೀವರಾದಿಯಾಗಿ ಅಣುರೇಣುತೃಣಕಾಷ್ಠದೊಳಗಿರುವಿಯೆಂದು ‘ನಾ’ ಹಾಡಿದ ಹಾಡು ಇವರ ಕಿವಿಗೆ ತಲುಪಲೇ ಇಲ್ಲ ಕೇಶವ !…
ಅನುದಿನ ಕವನ-೬೭೯, ಕವಿ:ಲೋಕೇಶ್ ಮನ್ವಿತಾ, ಬೆಂಗಳೂರು
ಯಾಕೋ ನಾನು ಇಂದು ಮೌನಿ ಹೃದಯದಲ್ಲಿ ಏತಕೋ ಮಾತಿಗೆ ಬರ ನಿರ್ಲಿಪ್ತ ಭಾವವೊಂದು ಸುಮ್ಮನೆ ಬೆರಳ ತುದಿಯಲ್ಲಿ ಕುಳಿತು ಮರಳು ಕೆದಕುತ್ತಿದೆ ಅಲೆಗಳಿನ್ನು ಪಾದ ಸೋಕಿಲ್ಲ ಕಾಣದಿರುವ ಚಂದಿರಗೆ ನಿರೀಕ್ಷೆ ಹೆಜ್ಜೆ ಗುರುತು ಯಾರದ್ದೋ ಎದೆಯ ತಳ ಊರಿದೆ ಕಾದು ಕೂತಿರುವವನ…
ಅನುದಿನ ಕವನ-೬೭೮, ಕವಯತ್ರಿ:ರಂ ಹೊ, ತುಮಕೂರು
ಪದ್ಯವಲ್ಲದ್ದು!! ಅವ್ವಾ ನಿನ್ನ ಸಮಾಧಿ ಎದುರು ಕೈ ಜೋಡಿಸಿ ನಿಂತರೂ ನೋಟ ಚಲಿಸುತ್ತಿರುತ್ತದೆ ಹೂತ ಜಾಗ ಬಿಟ್ಟು ಅಲ್ಲಿಯೇ ಮಾರು ಅಳತೆ ದೂರದ ಮಾವಿನ ತೋಟದಲ್ಲಿ ಹಸುವಿನ ಮೈ ದಡವುತ್ತಿರಬಹುದಾ! ನಿನ್ನೆದುರಿಗೆ ಕಟ್ಟೆಯ ಸುತ್ತ ಇರುವ ಹೂ ಗಿಡಗಳು ಪೊದೆಯಾದವೆಂದು ಕಂಕಳು…