ಅನುದಿನ ಕವನ: ೯೦೪, ಕವಿ: ಡಾ.ನಿಂಗಪ್ಪ‌ ಮುದೇನೂರು, ಧಾರವಾಡ ಕವನದ ಶೀರ್ಷಿಕೆ: ಮಗು ಹುಟ್ಟಿದ ದಿನ….

ಮಗು ಹುಟ್ಟಿದ ದಿನ

ಮಗು ಹುಟ್ಟಿದ ದಿನ
ಅಪ್ಪ ಹುಟ್ಟಿದ
ಅಮ್ಮ ಹುಟ್ಟಿದಳು
ಲೋಕದ ಚಲನೆಯೂ ಹುಟ್ಟಿತು

ಮಗುವಿನ ಅಳು
ಮಗುವಿನ ನಗು
ಅದರ ತುಂಟಾಟದ ಗೀಚು
ಗೆರೆಗಳೆಲ್ಲವೂ
ಲೋಕದ ಭಾಷೆಯಾಯ್ತು
ಭಾಷೆ ಅರಳಿ ಕಾವ್ಯವಾಯ್ತು

ಮಗು ಹುಟ್ಟಲೆಂದೇ
ಪ್ರಕೃತಿಯೂ ಹುಟ್ಟಿತು
ಸೂರ್ಯ ಚಂದ್ರ ಹಕ್ಕಿಮುಗಿಲು
ಚುಕ್ಕಿ ತುಂಬಿ
ಇಳೆಯು ಬೆಳಗಿತು
ಜೀವತಣಿಯಿತು

ಹೆಣ್ಣು ಗಂಡು
ಕೂಡುಕಟ್ಟಿ
ಫಲವು ಮೂಡಿತು
ಲೋಕದನ್ನವಾಯಿತು.


🔰-ಡಾ.ನಿಂಗಪ್ಪ ಮುದೇನೂರು, ಧಾರವಾಡ
*****

Leave a Reply

Your email address will not be published. Required fields are marked *