ನೇಗಿಲ ಯೋಗಿ ತಾಸ್ಹೊತ್ತು ಏರಿದರೆ ಕರುಳಿನ ಚೀರಾಟ ಹಸಿವಿನ ಮದ್ದಲೆ ನುಡಿದಾಂಗ / ದ್ಯಾವರೆ ವಾಡ್ಯಾದ ನೆರಳು ನಗೆಯಾಡಿ ! – ೧ – ಕಾಲಿಗೆ ಕಸುವಿಲ್ಲ ತೋಳಿಗೆ ಬಲುವಿಲ್ಲ ಮಾಗಿದ ಮಣ್ಣಿಗೆ ಋಣವಿಲ್ಲ / ದ್ಯಾವರೆ ಫಲವಿಲ್ಲದ ಮೋಡ ಮರಗ್ಯಾವ…
Category: ಅನುದಿನ ಕವನ
ಅನುದಿನ ಕವನ-೧೨೫೩, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ಬುದ್ಧನಾಗುವುದೆಂದರೆ….(ಗಜ಼ಲ್)
ಬುದ್ಧನಾಗುವುದೆಂದರೆ….(ಗಜ಼ಲ್) ಯಾರೂ ನನ್ನವರಲ್ಲ ಎಂಬ ಸತ್ಯ ತಿಳಿದಾಗಲೇ ನೀ ಬುದ್ಧನಾಗುವೆ ಎಲ್ಲರೂ ನನ್ನವರೇ ಎಂಬ ಸತ್ಯ ಅರಿತಾಗಲೇ ನೀ ಬುದ್ಧನಾಗುವೆ ಲೋಕದ ದುಃಖಕೆ ಮೂಲ ಹುಡುಕಿ ಹೊರಡಬೇಕು ಬಿಡುವಿಲ್ಲದಂತೆ ಇರುವುದೆಲ್ಲವ ತೊರೆದು ನಿತಾಂತ ನಡೆದಾಗಲೇ ನೀ ಬುದ್ಧನಾಗುವೆ ಜಾತಿ-ಮತಗಳ ಹಂಗು ಹರಿದು…
ಅನುದಿನ ಕವನ-೧೨೫೨, ಹಿರಿಯ ಕವಯಿತ್ರಿ: ಎಂ.ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಮರವೊಂದು ಕವಿತೆ
ವಿಶ್ವ ಪರಿಸರ ದಿನದ ಶುಭಾಶಯಗಳೊಂದಿಗೆ, ಮರವೊಂದು ಕವಿತೆ ಒಳಗಿನ ಸಂಭ್ರಮವ ಚಿಗುರಿ ಹೊರಚೆಲ್ಲುತ್ತದೆ ನೊಂದಾಗ ಎಲೆ ಕಳಚಿಕೊಂಡು ಬೋಳಾಗಿ ನಿಲ್ಲುತ್ತದೆ ಮರವೊಂದು ಹಾಡು ಕೊಂಬೆ ಮೇಲೆ ಹಕ್ಕಿಗಳ ಸಾಲಾಗಿರಿಸಿ ತಾನೂ ಹಾಡುತ್ತದೆ ಇಲ್ಲವೇ ಗೂಡಿನಲ್ಲಿನ ಲಾಲಿ ಗೀತೆಗಳ ಬೆರಗಿನಲ್ಲಿ ಕೇಳುತ್ತದೆ ಮರವೊಂದು…
ಅನುದಿನ ಕವನ-೧೨೫೧, ಕವಿ: ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ತರಹೀ ಗಜಲ್
ತರಹೀ ಗಜಲ್ ಮಿಸ್ರಾ : ಮಹಾಂತೇಶ ನವಲಕಲ್ ( ಸತ್ತ ಪಾರಿವಾಳ ಹಿಡಿದು ) ಸತ್ತ ಪಾರಿವಾಳ ಹಿಡಿದು ಬಂದಿದ್ದಾಳೆ ಅವಳು ಮುಳ್ಳು ಮಾತುಗಳನು ಹೊತ್ತು ತಂದಿದ್ದಾಳೆ ಅವಳು. ತಣ್ಣನೆಯ ಹೂ ಮುತ್ತನಿಟ್ಟು ನಿಂತಿದ್ದಾಳೆ ಅವಳು ಹರಿವ ಯಮುನೆಯ ನೋಡುತ ಕುಂತಿದ್ದಾಳೆ…
ಅನುದಿನ ಕವನ-೧೨೫೦, ಕವಯಿತ್ರಿ: ಎಚ್.ಎಸ್.ಮುಕ್ತಾಯಕ್ಕ, ರಾಯಚೂರು, ಕವನದ ಶೀರ್ಷಿಕೆ: ಎರಡು ಕವಿತೆಗಳು…..
ಎಚ್. ಎಸ್.ಮುಕ್ತಾಯಕ್ಕ ಅವರ ಎರಡು ಕವಿತೆಗಳು 1. ನನ್ನೊಲವೆ,ಎಲ್ಲಿಯಾದರೂ ನಾವಿಬ್ಬರೇ ಹಾಡುವಂಥ ಹಾಡುಗಳಿರಬೇಕಲ್ಲವೇ? ಕನಸುಗಳನ್ನಾರಿಸುವ ಶರಧಿಯ ದಂಡೆಯಿರಬೇಕಲ್ಲವೇ? ಮತ್ತೆ, ನಾವು ಎಂದಿಗೂ ಅಗಲದಂಥ ಮಾಂತ್ರಿಕ ಕ್ಷಣಗಳಿರಬೇಕಲ್ಲವೆ? ಚಂದ್ರ ರಾತ್ರಿಯನು ಮೋಹಿಸುವಾಗ, ನಾವಿಬ್ಬರೇ ಅಲೆಯುವಂಥ ಇರುಳುಗಳಿರಬೇಕಲ್ಲವೇ ಎಲ್ಲಿಯಾದರೂ? ಯಾವ ಸರಿ ತಪ್ಪುಗಳಿರದ, ಅಗಣಿತ,…
ಅನುದಿನ ಕವನ-೧೨೪೯, ಕವಯಿತ್ರಿ: ಲಾವಣ್ಯ ಪ್ರಭ, ಮೈಸೂರು
ಇಳಿದು ಬಾ ಗೆಳೆಯಾ ಇಳಿದು ಬಾ ಬಾ ಮಳೆಯೇ ಬಾ ಕರುಣೆಯಿರಲಿ ನಿನ್ನವರಲ್ಲಿ ಮಣ್ಣಮಕ್ಕಳ ಸೊಲ್ಲಡಗಿ ಹೋಗಿದೆ ಇಲ್ಲಿ ಬತ್ತುತ್ತಿರುವ ನದಿಗಂತೂ ನಿತ್ಯ ನಿನ್ನದೇ ಧ್ಯಾನ ನೀರಿಲ್ಲದೆ ನೀನಿಲ್ಲದೇ ಏನುಂಟು ಜೀವ ಪ್ರಪಂಚದೊಡಲಲ್ಲಿ ? ಯಾಕಾಗಿ ಈ ಕಣ್ಣಾಮುಚ್ಚಾಲೆಯಾಟ? ಯಾರಿಗಿದೆ ಸಂತಸ?…
ಅನುದಿನ ಕವನ-೧೨೪೮, ಹಿರಿಯ ಕವಿ: ಅರುಣಕುಮಾರ್ ಹಬ್ಬು, ಹುಬ್ಬಳ್ಳಿ
ಕಣ್ಣಿದ್ದೂ ಕಾಣದವರಿಗೆ ಕಾಣುವ ಕಣ್ಣ ಕೊಡಿ ಸುಖವಿದ್ದೂ ದುಃಖಿಸುವವರಿಗೆ ನಿಜ ಸುಖದ ಅರಿವು ನೀಡಿ ಹೃದಯವಿದ್ದೂ ಪ್ರೀತಿಸದವರಿಗೆ ಮಮತೆಯ ಖುಷಿಯ ಅನುಭವ ನೀಡಿ ಎಲ್ಲರಲಿ ದೋಷ ಕಾಣುವವರಿಗೆ ಸರಿ ತಪ್ಪಿನ ಭೇಧದರಿವು ಕಾಣಿಸಿ ಕೋಪವೇ ಜೀವವೆನುವವಗೆ ಪ್ರೀತಿಯ ಕಂಪು ಪಸರಿಸುವ ಹೂವಾಗಿ…
ಅನುದಿನ ಕವನ-೧೨೪೭, ಕವಿ: ಡಾ. ಗೋವಿಂದರಾಜ ಆಲ್ದಾಳ
ಮನದ ಮಲ್ಲಿಗೆ ಸಂಪಿಗೆ ಮೊಗದಲ್ಲಿ ಮಿಂಚಿನ ಮುಗುಳ್ನಗೆ ಭಾವದ ಬೆನ್ನೇರಿ ಕಾಡುತ್ತಿತ್ತು ! ಮುಂಗುರುಳ ಮೈಮಾಟ ನತ್ತಿನ ಕಣ್ಸನ್ನೆ ಮತ್ತೇರಿದ ಮನ ಕುಣಿಯುತ್ತಿತ್ತು ! – ೧ – ಬಳಕುವ ನಡದಲ್ಲಿ ತುಂಬಿದ ಯೌವನ ವಸಂತನ ಆಗಮನಕ ಕಾಯುತ್ತಿತ್ತು ! ಮೇದಿನಿ…
ಅನುದಿನ ಕವನ-೧೨೪೬, ಕವಯಿತ್ರಿ: ಶ್ರೀದೇವಿ ಕೆರೆಮನೆ, ಅಂಕೋಲ, ಉತ್ತರ ಕನ್ನಡ ಜಿ
ಒಲೆಯ ಮೇಲಿಟ್ಟ ಹಾಲು ಕಣ್ಣು ಮುಚ್ಚಿ ಒಡೆಯುವಷ್ಟರಲ್ಲಿ ಉಕ್ಕಿ ನೆಲ ಸೇರಿದೆ ಬೆಂಕಿಯ ಝಳಕ್ಕೆ ಕೆನೆ ಸೀದು ಕರಕಲಾಗಿದೆ…. ಪಾತ್ರೆ ಎತ್ತಿಟ್ಟು ಒಲೆಯ ಕಟ್ಟೆಯನ್ನು ಶುಚಿಗೊಳಿಸುವಾಗ ಎಂದೂ ಕಾಣದ ಅಸಹನೆ ನಾನೆ ಎಲ್ಲಾ ಕಡೆ ಓಡಾಡಿ ಬಡಿದಾಡಬೇಕೆ? ಅಡುಗೆ, ಮನೆಗೆಲಸ ಜೊತೆಗೆ…
ಅನುದಿನ ಕವಿತೆ-೧೨೪೫, ಕವಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು ಕವನದ ಶೀರ್ಷಿಕೆ:ನಿನ್ನಂತೆತೆಯೇ ಥೇಟ್ ನಿನ್ನಂತೆಯೇ…
ನಿನ್ನಂತೆತೆಯೇ ಥೇಟ್ ನಿನ್ನಂತೆಯೇ ಹಾಗೇ ಸುಮ್ಮನೆ ಅವುಚಿ ಕುಳಿತ ಕವಿತೆ ಕಿಸಕ್ಕೆಂದಿತು ಕಣ್ಣು ಮಿಟುಕಿಸಿ ಕೊಂಕಿಸಿ ಮೆಲುದನೀಲಿ ಉಸುರಿತು ನಾ ಬಲು ನಿಗೂಢ ನಿನ್ನಂತೆಯೇ ಥೇಟ್ ನಿನ್ನಂತೆಯೇ ಏನೋ ಆಗ ಮಿಂಚಿತ್ತು ಮಿಣುಕುತ್ತಿತ್ತು ಸುತ್ತ ಇಣುಕುತಿತ್ತು ಕೈಗೆ ಸಿಗದೇ ಓಡುತಿತ್ತು ತುಂಟ …
