ಯಾರಿಗ್ಗೊತ್ತು ? ಯಾರಿಗ್ಗೊತ್ತು ? ನಾಳೆ ನಾನು ಯಾವುದೋ ಚಿಟ್ಟೆಯ ಮೊಟ್ಟೆಯಾಗಿ ಮರಿ ಕಂಬಳಿಹುಳುವಾಗಿ ರೆಕ್ಕೆಯರಳಿಸಿ ನಿಮ್ಮ ತೋಟದ ಅಂಗಳದಲ್ಲೇ ಹಾರಾಡಬಹುದು ಯಾರಿಗ್ಗೊತ್ತು ? ನಾಳೆ ನಾನು ಹನಿಯಾಗಿ ಮೋಡದೊಳಗೆ ಸೇರಿ ಮಳೆ ಹನಿಯಾಗಿ ನಿಮ್ಮನ್ನು ತೋಯಿಸಿ ಹಿತ ನೀಡಬಹುದು ಯಾರಿಗ್ಗೊತ್ತು…
Category: ಅನುದಿನ ಕವನ
ಅನುದಿನ ಕವನ-೯೧೪, ಕವಿಯಿತ್ರಿ: ನಾಗರತ್ನ, ಹೂವಿನ ಹಡಗಲಿ, ಕವನದ ಶೀರ್ಷಿಕೆ:ನನ್ನ ಕವಿತೆ
ನನ್ನ ಕವಿತೆ ಮೆಚ್ಚುಗೆ ಪಡೆಯಲಾರದು ನನ್ನ ಕವಿತೆ ಹಸಿದವರ ಒಡಲಲ್ಲಿ ಕಣ್ಣೀರಿಡುತ್ತಿದೆ ನನ್ನ ಕವಿತೆ ಸಮ ಸಮಾಜದ ಜೊತೆಗಿದೆ ನನ್ನ ಕವಿತೆ ಪ್ರಚಾರದ ಹಂಗಿಲ್ಲ ನನ್ನ ಕವಿತೆಗೆ ಈಗಿನ್ನೂ ಅಂಬೆಗಲಾಡುತ್ತಿದೆ ನನ್ನ ಕವಿತೆ ಕೇಳುವ ಮನಗಳಿದ್ದರೆ ಸಾಕು ನನ್ನ ಕವಿತೆಗೆ ಸಮಾಜ…
ಅನುದಿನ ಕವನ-೯೧೩, ಕವಿಯಿತ್ರಿ- ಮಾನಸಗಂಗೆ, ತಿಪಟೂರು
ಬೆಳದಿಂಗಳ ಊಟ ಮಾಡಬಹುದಷ್ಟೇ; ನಿಮ್ಮಲ್ಲಿ ಯಾರೊಬ್ಬರೂ ಚಂದ್ರನ ತಟ್ಟೆಗೆ ಕೈ ಹಾಕಲಾಗದು!! *** ಮುಡಿದರು, ಬಾಡಿದರೂ ಈ ಮಲ್ಲಿಗೆ ಅವನಿಗಷ್ಟೇ ಮೀಸಲು; ನಿಮಗೆ ಸುವಾಸನೆಯೂ ಬೀರುವುದಿಲ್ಲ!! *** ಕತ್ತಲಿದೆ ಎಂದ ಮಾತ್ರಕ್ಕೆ ದಿಕ್ಕು ತಪ್ಪಿಸುವ ವ್ಯರ್ಥ ಪ್ರಯತ್ನ ಮಾಡಬೇಡಿ; ನಾನು ಹರ(ಅವ)ನಿಗಷ್ಟೇ…
ಅನುದಿನ ಕವನ-೯೧೨, ಕವಿ: ಮಲ್ಲಿಕಾರ್ಜುನಗೌಡ ತೂಲಹಳ್ಳಿ, ದಾವಣಗೆರೆ
ಬೈತಲೆಯ ಆಚೀಚೆ ಹೆರಳು ಸರಿಯುವಂತೆ ಮೋಡ ಸರಿದವು ಸಂಜೆ ಡ್ರಮ್ಮಿನಲಿ ಕೆಂಡವುರುಬಿ ಸರಳಿಗೆ ಸರ ಪೋಣಿಸಿದ ಖಾರ ಮೆತ್ತಿದ ಮಾಂಸ ಅರಳುತ್ತಿದೆ ಬೆಂಕಿಯಲಿ ಹೂವಾಗಿ ಲಾಫ್ಟಿನಲಿ ಎತ್ತಿಟ್ಟ ಪುರಾತನ ಮದಿರೆಯ ಕುಡಿಕೆಗೆ ಸುರಿಯುವ ಕಾಲಕ್ಕೆ ಚದುರಿದ ಮೋಡ ಒಗ್ಗೂಡಿ ಮಳೆ ಈಗ…
ಅನುದಿನ ಕವನ-೯೧೧, ಕವಿಯಿತ್ರಿ: ವಂದನಾ ಪರಾಶರ್ ಅನು: ಮಂಜುಳ ಕಿರುಗಾವಲು, ಮಂಡ್ಯ
ಹೆಣ್ಣು ಒದ್ದೆಯಾದ ಮಣ್ಣಿನಂತೆ ಅನೇಕ ಬಾರಿ ಅನೇಕ ರೂಪಗಳಲ್ಲಿ ಅವಳು ರೂಪುಗೊಳ್ಳುತ್ತಾಳೆ ಅವಳ ರೂಪು(ಸ್ಥಾನ) ಎಂದಿಗೂ ಸ್ಥಾಯಿಯಾಗಿರುವುದಿಲ್ಲ ಬದಲಾಗುತ್ತಲೇ ಇರುತ್ತದೆ ಬದುಕೆಂಬ ಬಿಸಿಲು, ಬೆಂಕಿಯಲ್ಲಿ ಬೆಂದು ಮೂರ್ತಿಗಳ ರೂಪದಲ್ಲಿ ಹೊರ ಬರುತ್ತಾಳೆ ಕೆಲವೊಮ್ಮೆ ಕಿವಿ ಇರುವುದಿಲ್ಲ ಕೆಲವೊಮ್ಮೆ ಬಾಯಿಲ್ಲ ಒಂದೊಮ್ಮೆ ಇದ್ದರೂ…
ಅನುದಿನ ಕವನ-೯೧೦, ಕವಿಯಿತ್ರಿ: ಮಮತಾ ಅರಸೀಕೆರೆ, ಹಾಸನ ಜಿ.
೦೧. ರಾತ್ರಿ ಕಣ್ಣಿರಲ್ಲಿ ಒದ್ದೆಯಾಗುವ ಹಾಸಿಗೆ ಅಂಗೈಯಲ್ಲಿ ಬೆಚ್ಚಗಿದ್ದು ಆಗಾಗ್ಗೆ ನೆನೆಯುವ ವಸ್ತ್ರ ತನಗೊರಗಿಸಿಕೊಂಡು ಸಾಂತ್ವನಿಸುವ ಗೋಡೆ ಕಣ್ತುಂಬಿ ಹಸಿಯಾಗುವ ರೆಪ್ಪೆಗಳು ಏನೆಲ್ಲಾ ಕಥೆ ಹೇಳಿಬಿಡುತ್ತಿದ್ದವೇನೋ ಎಷ್ಟೆಲ್ಲಾ ರಂಗು ಹಚ್ಚಿಕೊಳ್ಳುತ್ತಿತ್ತೇನೋ ಅಬ್ಬಾ ! ಸದ್ಯ ಕಣ್ಣೀರಿಗೆ ಯಾವ ಬಣ್ಣವೂ ಇಲ್ಲ.. ೦೨.…
ಅನುದಿನ ಕವನ-೯೦೯, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ ಜಿ. ಕವನದ ಶೀರ್ಷಿಕೆ:ಹೂವೇ..ತಿಳಿದೆನು ನಿಜವಾ..
ಹೂವೇ..ತಿಳಿದೆನು ನಿಜವಾ.. ಮುಡಿಯೇರದ ಹೂ ಗುಡಿ ಸೇರದೇ ಬಂದು ನನ್ನ ಕಂಬನಿಯ ಒರೆಸುತಿದೆ ಗಟಾರದ ಹೂವಿಗೆ ಗುಡಿಸಲ ಸುಮದ ಸ್ನೇಹ ನನಗೋ.. ಹೂವ ಜೊತೆ ಬಿಡಿಸದ ಸಮ್ಮೋಹ ಅಳುವುದಕೆ ಇಲ್ಲಿ ಯಾರೂ… ಬೆಲೆ ನೀಡದ ಹೊತ್ತಲ್ಲಿ ನನ್ನ ತಲೆ ಕಾಯ್ವ ಹೂವೊಂದು…
ಅನುದಿನ ಕವನ-೯೦೮, ಕವಿ: ಉದಯಕುಮಾರ್ ಹಬ್ಬು, ಕಿನ್ನಿಗೋಳಿ ಕವನದ ಶೀರ್ಷಿಕೆ: ಇಳೆಮಳೆ
ಇಳೆ ಮಳೆ ಇಳೆಗೂ ಮಳೆಗೂ ಪ್ರೇಮ ಸರಸ ಸಲ್ಲಾಪ ಮಳೆಗೂ ಬೆಳೆಗೂ ಅಂಟಿದ ನಂಟು ರಾಸಲೀಲೆಯಾಡುತ್ತಿವೆ ಪ್ರಿಯೆ ಪ್ರಿಯಕರ ಶಕ್ತಿ ಸಂಚಯನ, ಶಕ್ತಿ ಸಂಚಲನ ಇಳೆಯು ವರ್ಷಾಳತ್ತ ಕೈ ಚಾಚಿದೆ ಮಳೆಯು ಇಳೆಯತ್ತ ಮೈಚಾಚಿದೆ. ತಬ್ಬಿಕೊಂಡಿವೆ ಅಪ್ಪಿ ಹಿಡಿದಿವೆ. ಬೆವರುತ್ತಿದ್ದಾರೆ ಈರ್ವರೂ…
ಅನುದಿನ ಕವನ-೯೦೭, ಕವಿ: ಡಾ. ವೈ. ಎಂ. ಯಾಕೊಳ್ಳಿ, ಸವದತ್ತಿ, ಕವನದ ಶೀರ್ಷಿಕೆ:ಋಣವೆಂಬುದದು ಎಷ್ಟು ಬಾಕಿ….
ಋಣವೆಂಬುದದು ಎಷ್ಟು ಬಾಕಿ… ಮನೆಯಮುಂದೆ ನಾನು ಹಚ್ಚಿದ ಗಿಡ ಬಹಳ ದಿನವೇನಾಗಿಲ್ಲ ಬೆಳೆದು ನಿಂತಿದೆ ಮನೆಯುದ್ದ ನಾನು ಹಚ್ಚಿದ.. ಎಂಬ ಪದ ಸರಿಯೇ ಎಂದು ಸಾಕಷ್ಟು ಸಲ ಜಿಹ್ಞಾಸೆ.. ಯಾರೋ ಕೊಟ್ಟಿದ್ದ ಸಸಿ ತಂದು ಭೂಮಿಯೊಳಗೆ ಊರಿದ್ದು ಮಾತ್ರ ನಾನೇ! ಒಂದಿಷ್ಟು…
ಅನುದಿನ ಕವನ-೯೦೬, ಕವಿ: ಪ್ರಭಾಕರ ಜೋಷಿ, ಸೇಡಂ, ಕಲಬುರಗಿ ಜಿ. ಕಾವ್ಯ ಪ್ರಕಾರ: ಹಾಯ್ಕುಗಳು
ಹತ್ತು ಹಾಯ್ಕುಗಳು ೧. ಗಿಳಿ ನೆರಳು ಗಿಡದ ನೆರಳಲ್ಲಿ ಹೋಯಿತೆಲ್ಲಿಗೆ ೨. ಹಾರಿದ ಗಿಳಿ ಮತ್ತೊಮ್ಮೆ ಮರಳಿದೆ ಬಣ್ಣದ ನೆನಪು ೩. ಪ್ರತಿಬಿಂಬವು ಕೆರೆಯಲ್ಲಿ ಮುಳುಗಿ ಚಂದ್ರನು ಶುಭ್ರ ೪. ಮರೆಯದಿರು ಪಿಸುಮಾತ ಪ್ರೀತಿಗೆ ಉಳಿದ ಮಾತು ೫. ಭೂಮಿ ಆಕಾಶ…
