ಅನುದಿನ ಕವನ-೯೦೯, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ ಜಿ. ಕವನದ ಶೀರ್ಷಿಕೆ:ಹೂವೇ..ತಿಳಿದೆನು ನಿಜವಾ..

ಹೂವೇ..ತಿಳಿದೆನು ನಿಜವಾ..

ಮುಡಿಯೇರದ
ಹೂ
ಗುಡಿ ಸೇರದೇ ಬಂದು
ನನ್ನ
ಕಂಬನಿಯ
ಒರೆಸುತಿದೆ
ಗಟಾರದ ಹೂವಿಗೆ
ಗುಡಿಸಲ
ಸುಮದ ಸ್ನೇಹ
ನನಗೋ..
ಹೂವ ಜೊತೆ
ಬಿಡಿಸದ ಸಮ್ಮೋಹ
ಅಳುವುದಕೆ ಇಲ್ಲಿ
ಯಾರೂ…
ಬೆಲೆ ನೀಡದ ಹೊತ್ತಲ್ಲಿ
ನನ್ನ ತಲೆ ಕಾಯ್ವ
ಹೂವೊಂದು
ನೇವರಿಸುತಿದೆ
ಎದೆಯೊಡಲ ಬೇಗೆಯ
ಆರಿಸುತಿದೆ..
ಘಮವಿಲ್ಲದ ಗುಡಿಸಲ
ಸುಮಕೆ
ಸಮವಾಗುತಿದೆ ಬೇಲಿಯ ಹೂವೊಂದು.


-ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ ಜಿ.
—–

Leave a Reply

Your email address will not be published. Required fields are marked *