9 ಮಹಾನಗರ ಪಾಲಿಕೆ: ಸಫಾಯಿ ಕರ್ಮಚಾರಿ ಮಹಿಳೆಯರಿಗೆ ಬ್ಯಾಟರಿ ಚಾಲಿತ ವಾಹನ: ಅಧ್ಯಕ್ಷ ಹೆಚ್. ಹನುಮಂತಪ್ಪ

ಬಳ್ಳಾರಿ,ಸೆ.27: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 9 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಫಾಯಿ ಕರ್ಮಚಾರಿ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಮಹಿಳೆಯರ ದಿನನಿತ್ಯದ ಓಡಾಟಕ್ಕಾಗಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ನೀಡಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ…

ಬಳ್ಳಾರಿಯ ಮುಂಡ್ರಿಗಿಯಲ್ಲಿ ಮಿಶ್ರತಳಿ ಆಕಳು ಮತ್ತು ಕರುಗಳ ಪ್ರದರ್ಶನ

ಬಳ್ಳಾರಿ,ಸೆ.20: ಪ್ರಸಕ್ತ(2021-22) ಸಾಲಿನ ವಿಸ್ತರಣಾ ಘಟಕಗಳನ್ನು ಬಲಪಡಿಸುವಿಕೆ ಯೋಜನೆಯಡಿ ಮಿಶ್ರತಳಿ ಆಕಳು ಮತ್ತು ಕರುಗಳ ಪ್ರದರ್ಶನವನ್ನು ನಗರದ ಹೊರವಲಯದ ಮುಂಡ್ರಿಗಿ ಗ್ರಾಮದಲ್ಲಿ ಭಾನುವಾರ ಆಯೋಜಿಸಲಾಗಿತ್ತು. 38 ಜಾನುವಾರುಗಳ ಮಾಲಿಕರು 43 ಮಿಶ್ರತಳಿ ಹಸು ಮತ್ತು 40 ಕರುಗಳು ಭಾಗವಹಿಸಿದ್ದವು, ಹೆಚ್‍ಎಫ್ ತಳಿ…

ಬಳ್ಳಾರಿ: ಹಿರಿಯ ನಾಗರೀಕರ ಪ್ರತ್ಯೇಕ ಆಸ್ಪತ್ರೆ ಕಟ್ಟಡಕ್ಕೆ ಶಾಸಕರಿಂದ‌ ಶಂಕುಸ್ಥಾಪನೆ

ಬಳ್ಳಾರಿ, ಸೆ.19: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಹಿರಿಯ ನಾಗರೀಕರಿಗಾಗಿ 10 ಬೆಡ್ ಗಳ ಆಸ್ಪತ್ರೆ ನಿರ್ಮಾಣಕ್ಕೆ _ಶನಿವಾರ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು. ಅಂದಾಜು 80ಲಕ್ಷ ರೂ ವೆಚ್ಚದಲ್ಲಿ ಇದನ್ನು ನಿರ್ಮಾಣ…

ಬಳ್ಳಾರಿಯಲ್ಲಿ ಸಂಭ್ರಮದ ಕಲ್ಯಾಣ ಕರ್ನಾಟಕ ಉತ್ಸವ: ಉದ್ಯೋಗ,ಶಿಕ್ಷಣ ಮೀಸಲಾತಿ:1.41ಲಕ್ಷ ಅಭ್ಯರ್ಥಿಗಳಿಗೆ 371(ಜೆ) ಪ್ರಮಾಣ ಪತ್ರ ವಿತರಣೆ: ಜಿಲ್ಲಾಧಿಕಾರಿ ಮಾಲಪಾಟಿ

ಬಳ್ಳಾರಿ,ಸೆ.17: ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಅನುಕೂಲವಾಗುವ 371(ಜೆ) ಪ್ರಮಾಣ ಪತ್ರಗಳನ್ನು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಒಟ್ಟು 1,41,877 ಅಭ್ಯರ್ಥಿಗಳಿಗೆ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಹೇಳಿದರು. ಬಳ್ಳಾರಿ ಜಿಲ್ಲಾಡಳಿತ ನಗರದ…

ಸಿರುಗುಪ್ಪ ತಾಲೂಕು ಆರೋಗ್ಯ ಅಧಿಕಾರಿಯಾಗಿ ಡಾ.ಈರಣ್ಣ ಸೇಮಕ

ಲಸಿರುಗುಪ್ಪ, ಸೆ.16: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಈರಣ್ಣ ಅವರು ತಾಲೂಕು ವೈದ್ಯಾಧಿಕಾರಿಯಾಗಿ ವರ್ಗವಾಗಿದ್ದಾರೆ. ಈ ಕುರಿತಂತೆ ಸರಕಾರದ ಅಧೀನ ಕಾರ್ಯದರ್ಶಿ ಶಿವಶಂಕರ್ ಅವರ ಅಧಿಸೂಚನಾ ಪತ್ರದಲ್ಲಿ ಸಾರ್ವಜನಿಕರು ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಕೂಡಲೇ ಜಾರಿಗೆ ಬರುವಂತೆ, ಮುಂದಿನ…

ಬಳ್ಳಾರಿಯ ಅಂತರಾಷ್ಟ್ರೀಯ ಕವಿ ಸಮ್ಮೇಳನಕ್ಕೆ ಕ್ಯೂರೇಟರ್ ಆಗಲು ಸಿದ್ಧ -ಪ್ರಸಿದ್ಧ ಕವಿ ಡಾ. ಹೆಚ್ ಎಸ್ ಶಿವಪ್ರಕಾಶ್

ಬಳ್ಳಾರಿ, ಸೆ.12: ಕರ್ನಾಟಕ ಸಾಂಸ್ಕೃತಿಕ ಇತಿಹಾಸಕ್ಕೆ ಅವಿಭಜಿತ ಬಳ್ಳಾರಿ ಜಿಲ್ಲೆ ನೀಡಿರುವ ಕೊಡುಗೆ ಅಮೂಲ್ಯ ಎಂದು ಪ್ರಸಿದ್ಧ ಹಿರಿಯ ಕವಿ ಡಾ. ಹೆಚ್ ಎಸ್ ಶಿವಪ್ರಕಾಶ್ ಅವರು ಕೊಂಡಾಡಿದರು. ನಗರದಲ್ಲಿ ಭಾನುವಾರ ಸ್ಥಳೀಯ ಕವನ ಪ್ರಕಾಶನ ಪ್ರಕಟಿಸಿರುವ ಅಜಯ ಬಣಕಾರ ಅವರ…

ನರೇಗಾ ಪರಿಣಾಮಕಾರಿ ಅನುಷ್ಠಾನದಲ್ಲಿ ರಾಜ್ಯ ದೇಶಕ್ಕೆ ಮಾದರಿ -ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರಪ್ಪ

ಬಳ್ಳಾರಿ,ಸೆ.12: ನರೇಗಾ ಅಡಿಯಲ್ಲಿ ಕಳೆದ ವರ್ಷ 15 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ನರೇಗಾ ಪರಿಣಾಮಕಾರಿ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.…

18 ತಿಂಗಳಲ್ಲಿ 28 ಸಾವಿರ ಕೆರೆಗಳ ಜೀಣೋದ್ಧಾರ. -ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ

ಬಳ್ಳಾರಿ, ಸೆ. 12: ರಾಜ್ಯದಲ್ಲಿರುವ 28 ಸಾವಿರ ಕೆರೆಗಳನ್ನು ಮುಂದಿನ ಒಂದೂವರೆ ವರ್ಷದಲ್ಲಿ ಜೀರ್ಣೊದ್ಧಾರ ಮಾಡುವ ಗುರಿ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು. ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ…

ಬಳ್ಳಾರಿಯಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ: ಪರಿಸರ ಸಂರಕ್ಷಣೆ ಯಲ್ಲಿ ಅರಣ್ಯ ಸಿಬ್ಬಂದಿಯ ಪಾತ್ರ ಅನನ್ಯ -ಜಿಲ್ಲಾಧಿಕಾರಿ ಮಾಲಪಾಟಿ

ಬಳ್ಳಾರಿ,ಸೆ.11: ವನ್ಯಜೀವಿ‌ ಹಾಗೂ ಪರಿಸರ ರಕ್ಷಣೆಗೆ ಜೀವ ಮುಡುಪಿಟ್ಟ ಹುತಾತ್ಮರ ನೆನಪು ಮಾಡಿಕೊಳ್ಳುವುದರ ಜೊತೆಗೆ ಪ್ರಾಣ ಕಳೆದುಕೊಂಡವರ ಕುಟುಂಬದ ನೆರವಿಗೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಹೇಳಿದರು‌. ನಗರದ‌ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಆವರಣದಲ್ಲಿ…

ಬಳ್ಳಾರಿಯಲ್ಲಿ ಜಿಲ್ಲಾ ಖನಿಜ ನಿಧಿಯ ಪ್ರಗತಿ ಪರಿಶೀಲನಾ ಸಭೆ: ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಶಾಸಕರು ಭಾಗಿ

ಬಳ್ಳಾರಿ, ಸೆ.9: ಜಿಲ್ಲಾ ಖನಿಜ ನಿಧಿಯ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು. ಶಾಸಕರಾದ ಕೆ.ಸಿ.ಕೊಂಡಯ್ಯ,ಅಲ್ಲಂ ವೀರಭದ್ರಪ್ಪ, ಎಂ.ಎಸ್. ಸೋಮಲಿಂಗಪ್ಪ, ಬಿ.ನಾಗೇಂದ್ರ, ಈ.ತುಕಾರಾಂ, ಜಿ. ಸೋಮಶೇಖರ್ ರೆಡ್ಡಿ, ಜೆ.ಎನ್…