ಹಂಪಿ:ಮುಸಕ್ಕಿದ್ದ ಮೋಡಗಳು ಶನಿವಾರ ಸಂಜೆಯಾದಂತೆ ಇದ್ದಕ್ಕಿದ್ದಂತೆ ಚದುರಿ ಹೊಂಬಣ್ಣಕ್ಕೆ ತಿರುಗಿದ್ದು ಇದನ್ನು ನಿರೀಕ್ಷಿಸರಲಿಲ್ಲ. ಹೀಗೆ ಅನಿರೀಕ್ಷಿತ ಘಟನಾವಳಿ ಸೆರೆಗೆ ಕಾಯಬೇಕಷ್ಟೆ. ವಿಜಯವಿಠ್ಠಲ ದೇಗುಲದ ದ್ವಾರಗೋಪುರವು ಮೋಡಗಳ ಚೆಲ್ಲಾಟದಲ್ಲಿ ನಿನ್ನೆ ವಿಭಿನ್ನವಾಗಿ ಕಾಣಿಸಿತು. ಚಿತ್ರ-ಮಾಹಿತಿ: ಶಿವಶಂಕರ್ ಬಣಗಾರ👇 (ಚಿತ್ರ:ಸಿ.ಮಂಜುನಾಥ್)
Category: ಹೊಸಪೇಟೆ(ವಿಜಯನಗರ)
ಪಿಸಿ,ಪಿಎನ್‍ಡಿಟಿ ಲಿಂಗ ಆಯ್ಕೆ ನಿಷೇಧ ಕಾಯ್ದೆ ಪರಿಣಾಮಕಾರಿ ಅನುಷ್ಠಾನ: ಡಿಎಚ್‍ಒ ಡಾ.ಜನಾರ್ಧನ್
ಬಳ್ಳಾರಿ,ಜು.17: ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಪತ್ತೆ ತಂತ್ರ ವಿಧಾನವನ್ನು ಬಳ್ಳಾರಿ ಜಿಲ್ಲೆಯಲ್ಲಿ ಪಿಸಿ ಮತ್ತು ಪಿಎನ್ಡಿಟಿ ಲಿಂಗ ಆಯ್ಕೆ ನಿಷೇಧ ಕಾಯ್ದೆ ಅನ್ವಯ ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಜನಾರ್ಧನ್ ಹೇಳಿದರು. ನಗರದ…
ಹೊಸಪೇಟೆ: 1.65 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಹೊಸಪೇಟೆ(ವಿಜಯನಗರ),ಜು.16: 2020-21ನೇ ಸಾಲಿನ ಡಿಎಂಎಫ್ ಯೋಜನೆಯಡಿಯಲ್ಲಿ ಮಂಜೂರಾದ 90 ಲಕ್ಷ ವೆಚ್ಚದಲ್ಲಿ ನಗರದ ಉದ್ಯೋಗ ಪೆಟ್ರೋಲ್ ಬಂಕ್‍ನಿಂದ ಮೇನ್ ಬಜಾರ್ ಮುಖಾಂತರ ಬಳ್ಳಾರಿ ಸರ್ಕಲ್‍ವರೆಗಿನ ರಸ್ತೆ ಅಭಿವೃದ್ಧಿ ಹಾಗೂ 75 ಲಕ್ಷ ವೆಚ್ಚದ ಹೊಸಪೇಟೆ ನಗರದ ರಾಮ್‍ಲೀ ಸ್ವಾಮಿ ಮಜೀದ್ ರಸ್ತೆಯಿಂದ…
ಜಿಲ್ಲೆಯ ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯ, ತಪ್ಪಿದರೆ ಕಾಲೇಜು ತೆರೆಯಲು ಅವಕಾಶ ಇಲ್ಲ -ಡಿಸಿ ಮಾಲಪಾಟಿ ಎಚ್ಚರಿಕೆ
ಬಳ್ಳಾರಿ,ಜು.01: ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಲಸಿಕೆ ನೀಡಿ ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಲಸಿಕೆ ತಪ್ಪಿದ್ದಲ್ಲಿ ಕಾಲೇಜುಗಳು ತೆರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ನಗರದ…
ಐತಿಹಾಸಿಕ ತಾಣ ಹಂಪಿಯ ರಕ್ಷಣೆ ಮತ್ತು ಅಭಿವೃದ್ಧಿಗೆ ಇಲಾಖೆ ಕ್ರಿಯಾಯೋಜನೆ ರೂಪಿಸಿದೆ. -ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್
ಹೊಸಪೇಟೆ( ವಿಜನಯಗನರ): ಪ್ರವಾಸೋದ್ಯಮದ ಅಭಿವೃದ್ದಿಯ ದೃಷ್ಟಿಯಿಂದ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್ ಆವರಣದ 250 ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್, ತ್ರಿ ಸ್ಟಾರ್ ಹೋಟೆಲ್, ವಸತಿ ನಿಲಯ ಹಾಗೂ ಹೆಲಿಕ್ಯಾಪ್ಟರ್ ಲ್ಯಾಂಡ್ ಏರಿಯಾ ಒಳಗೊಂಡಂತೆ ಸರ್ವತೋಮುಖ ಅಭಿವೃದ್ಧಿಗೆ ಕ್ರಿಯಾಯೋಜನೆ…
ಮಾದಕ ದ್ರವ್ಯಗಳ ವಿರೋಧಿ ದಿನಾಚರಣೆ: ಒಂದು ಕೋಟಿ ರೂ. ಅಧಿಕ ಮೌಲ್ಯದ ಗಾಂಜಾ ನಾಶ
ಬಳ್ಳಾರಿ,ಜೂ.26: ಅಂತಾರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಪೊಲೀಸ್ ಠಾಣೆಗಳ 62 ಪ್ರಕರಣಗಳಲ್ಲಿ ಜಪ್ತಿ ಪಡಿಸಿಕೊಂಡಿದ್ದ ಅಂದಾಜು ಮೌಲ್ಯ 1,0065,745 ರೂ. ಬೆಲೆ ಬಾಳುವ 630 ಕೆಜಿ ಗಾಂಜಾವನ್ನು ಶನಿವಾರ ನಾಶಪಡಿಸಲಾಯಿತು. ತಾಲೂಕಿನ ಹರಗಿನದೋಣಿ ಗ್ರಾಮದ ಬಳಿ ಇರುವ ಮಹಾನಗರ…
ಕೂಡ್ಲಿಗಿಯಲ್ಲಿ ಕರುನಾಡು ಸ್ವಯಂ ಸೇವಾ ಸಂಸ್ಥೆಯಿಂದ ಸ್ವಚ್ಛತೆ ಕುರಿತ ಜಾಗೃತಿ ಬೀದಿ ನಾಟಕ ಪ್ರದರ್ಶನ
ಕೂಡ್ಲಿಗಿ, ಜೂ.23: ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಸ್ವಚ್ಛ ಪರಿಸರ ನಮ್ಮ ಆರೋಗ್ಯದ ಗುಟ್ಟು ಎಂದು ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸದಸ್ಯ ಕಾವಲಿ ಶಿವಪ್ಪನಾಯಕ ಹೇಳಿದರು. ಪಟ್ಟಣದ ರಾಜವೀರ ಮದಕರಿ ವೃತ್ತದಲ್ಲಿ ಕೂಡ್ಲಿಗಿ ಪಟ್ಟಣ ಪಂಚಾಯಿತಿಯಿಂದ ಸ್ವಚ್ಛ ಭಾರತ ಮಿಷನ್…
ಬಳ್ಳಾರಿಯಲ್ಲಿ 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಜಿಲ್ಲೆಯಾದ್ಯಂತ ಯೋಗ ಪ್ರಶಿಕ್ಷಣ ಕಾರ್ಯಕ್ರಮ ಯಶಸ್ವಿ
ಬಳ್ಳಾರಿ: 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸೋಮವಾರ ಜಿಲ್ಲೆಯಾದ್ಯಂತ ಯೋಗ ಪ್ರಶಿಕ್ಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಯುಷ್ ಇಲಾಖೆ, ಆರ್ಟ್ ಆಫ್ ಲಿವಿಂಗ್, ಪತಂಜಲಿ ಯೋಗ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು. ಗೂಗಲ್ ವರ್ಚುವಲ್…
ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ ಜೂ.21ರಿಂದ 18ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ : ಜಿಲ್ಲಾಧಿಕಾರಿ ಮಾಲಪಾಟಿ
ಬಳ್ಳಾರಿ,ಜೂ.19: 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಜಿಲ್ಲೆಯಲ್ಲಿ ಜೂ.21ರಿಂದ ಕೋವಿಡ್ ಲಸಿಕೆ ನೀಡಲು ಉದ್ದೇಶಿಸಲಾಗಿದೆ. ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ…
‘ಕುಲದಲ್ಲಿ ಕೀಳ್ಯಾವುದೋ’ ಹಾಡಿಗೆ ಹೆಜ್ಜೆ ಹಾಕಿದ ಹಬೊ ಹಳ್ಳಿ ತಾಲೂಕು ಆಡಳಿತ, ಸಂಭ್ರಮಿಸಿದ ಕೋವಿದ್ ಸೋಂಕಿತರು
ಹಗರಿಬೊಮ್ಮನಹಳ್ಳಿ: “ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ ….” ಸತ್ಯ ಹರಿಶ್ಚಂದ್ರ ಚಿತ್ರದ ಈ ಜನಪ್ರಿಯ ಹಾಡಿಗೆ ಇಡೀ ತಾಲೂಕು ಆಡಳಿತವೇ ಹೆಜ್ಜೆ ಹಾಕಿತು… ಹೌದು…ಶುಕ್ರವಾರ ಸಂಜೆ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿ ಕೋವಿದ್ ಕೇರ್ ಸೆಂಟರ್ ನಲ್ಲಿ ತಹಸೀಲ್ದಾರ್ ಶರಣಮ್ಮ, ತಾಪಂ…