75ನೇ ಸ್ವಾತಂತ್ರ ದಿನಾಚರಣೆ: ಕೊವೀಡ್ ವಾರಿಯರ್ಸ್ ರಿಗೆ ಸನ್ಮಾನ

ಹಗರಿಬೊಮ್ಮನಹಳ್ಳಿ, ಆ.16: ಪಟ್ಟಣದಲ್ಲಿ ಭಾನುವಾರ ಜರುಗಿದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೊವೀಡ್ ವಾರಿಯರ್ಸ್ ಆಗಿ ದುಡಿದ ಸಂಗೀತ ಶಿಕ್ಷಕಿ ಶಾರದ ಕೊಪ್ಪಳ ಸೇರಿದಂತೆ ಹಲವರನ್ನು ತಾಲೂಕು ಆಡಳಿತ ಸನ್ಮಾನಿಸಿ ಗೌರವಿಸಿತು.
ಶಾಸಕ ಎಸ್.ಭೀಮನಾಯ್ಕ್, ತಹಶೀಲ್ದಾರ್ ಶರಣಮ್ಮ ಅವರು ಕೊವೀಡ್ ವಾರಿಯರ್ಸ್ ಜತೆ ಸಮಾಜ ಸೇವೆಯಲ್ಲಿ ತೊಡಗಿರುವ ಸಂಘ ಸಂಸ್ಥೆಗಳ‌ ಮುಖಂಡರನ್ನು ಸತ್ಕರಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
*****

Leave a Reply

Your email address will not be published. Required fields are marked *