ಬಳ್ಳಾರಿ ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ವೈ ಎಂ ಸತೀಶ್ ನಾಮಪತ್ರ ಸಲ್ಲಿಕೆ

ಬಳ್ಳಾರಿ, ನ.23:  ಕರ್ನಾಟಕ ವಿಧಾನಪರಿಷತ್ ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ವೈ.ಎಂ.ಸತೀಶ‌ ಅವರು ಚುನಾವಣಾಧಿಕಾರಿ ಪವನಕುಮಾರ್ ಮಾಲಪಾಟಿ ಅವರಿಗೆ ನಾಮಪತ್ರ ಸಲ್ಲಿಸಿದರು.      ಮಂಗಳವಾರ ಬೆಳಿಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರ ಜತೆ ಆಗಮಿಸಿದ ಸತೀಶ್ ಅವರು ಎರಡು…

ಬಳ್ಳಾರಿಯಲ್ಲಿ ಶ್ರೇಷ್ಠ ಸಮಾಜ ಸುಧಾರಕ‌ ಶ್ರೀ ಕನಕದಾಸ ಜಯಂತಿ ಆಚರಣೆ

ಬಳ್ಳಾರಿ,ನ.22:ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಶ್ರೇಷ್ಠ ಸಮಾಜ ಸುಧಾರಕ‌ ಶ್ರೀ ಕನಕದಾಸರ ಜಯಂತಿಯನ್ನು ಸೋಮವಾರ ಆಚರಿಸಲಾಯಿತು. ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ನಗರದ ಕನಕವೃತ್ತದಲ್ಲಿರುವ ಭಕ್ತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ…

ಬಳ್ಳಾರಿ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ನಿಷ್ಠಿ ರುದ್ರಪ್ಪ ಆಯ್ಕೆ

ಬಳ್ಳಾರಿ, ನ.21: ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಲೇಖಕ ಡಾ. ನಿಷ್ಠಿ ರುದ್ರಪ್ಪ ಅವರು ಆಯ್ಕೆಯಾಗಿದ್ದಾರೆ. ಈ ಕುರಿತು ಜಿಲ್ಲಾ ಕಸಾಪ ಚುನಾವಣಾಧಿಕಾರಿ ಅಧಿಕೃತವಾಗಿ ಘೋಷಿಸಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಲೇ ಬೆಂಬಲಿಗರು, ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಒಟ್ಟು 7084…

ಬಳ್ಳಾರಿಯಲ್ಲಿ ಪದ್ಮಶ್ರೀ ಮಂಜಮ್ಮಗೆ ಸತ್ಕಾರ: ರಂಗಕಲಾವಿದ ಪುರುಷೋತ್ತಮ ಹಂದ್ಯಾಳ್ ಕುಟುಂಬದಿಂದ ಆತ್ಮೀಯ ಸನ್ಮಾನ

ಬಳ್ಳಾರಿ, ನ.19: ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಗೌರವ ಸ್ವಿಕರಿಸಿದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಅವರನ್ನು ನಗರದಲ್ಲಿ ಸತ್ಕರಿಸಿ ಗೌರವಿಸಲಾಯಿತು. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬುಧವಾರ ನಗರಕ್ಕೆ ಆಗಮಿಸಿದ್ದ ಮಂಜಮ್ಮ…

ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ನಿರಂತರ ಸಾಹಿತ್ಯಿಕ ಸಾಂಸ್ಕೃತಿಕ ವಾತಾವರಣ ನಿರ್ಮಾಣ ತಮ್ಮ ಗುರಿ – ಹಿರಿಯ ಪತ್ರಕರ್ತ, ಕಸಾಪ ಅಭ್ಯರ್ಥಿ ಸಿ.ಮಂಜುನಾಥ್

ಬಳ್ಳಾರಿ, ನ.18: ನಿರಂತರ ಸಾಹಿತ್ಯ, ಜಾನಪದ, ರಂಗಭೂಮಿ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವುದು ತಮ್ಮ ಸಂಕಲ್ಪವಾಗಿದೆ ಎಂದು ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಬಳ್ಳಾರಿ ಜಿಲ್ಲಾ ಕಸಾಪ ಅಭ್ಯರ್ಥಿ ಸಿ.ಮಂಜುನಾಥ್…

ಪಾಲಕರ ಕನಸು ನನಸು ಮಾಡಲು ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು – ನ್ಯಾ.ಸದಾನಂದ ದೊಡ್ಡಮನಿ

ಶ್ರೀಮೇದಾ ಕಾಲೇಜಿನಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಬಳ್ಳಾರಿ,ನ.12:ಅನೇಕ ಕಷ್ಟಗಳನ್ನು ಅನುಭವಿಸುತ್ತಾ ತಮಗೆ ಉತ್ತಮ ಶಿಕ್ಷಣ ಒದಗಿಸಿಕೊಡುವ ಮೂಲಕ ಒಳ್ಳೆಯ ಭವಿಷ್ಯ ರೂಪಿಸುವುದಕ್ಕೆ ಮುಂದಾಗಿರುವ ಅಪ್ಪ ಅಮ್ಮರ ಕನಸು ನನಸು ಮಾಡಲು ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು 1ನೇ ಅಪರ ಮತ್ತು ಜಿಲ್ಲಾ…

ಕೂಡ್ಲಿಗಿ: ನಾಳೆ (ನ.11)ಗುಡೇಕೋಟೆಯ ಗಟ್ಟಿಗಿತ್ತಿ “ಒನಕೆ ಓಬವ್ವ” ಕೃತಿ ಲೋಕಾರ್ಪಣೆ

ಕೂಡ್ಲಿಗಿ, ನ.10: ತಾಲೂಕಿನ ಹಿರಿಯ ಪತ್ರಕರ್ತ, ಲೇಖಕ ಭೀಮಣ್ಣ ಗಜಾಪುರ ಅವರು ರಚಿಸಿರುವ ಗುಡೋಕೋಟೆಯ ಗಟ್ಟಿಗಿತ್ತಿ “ ಒನಕೆ ಓಬವ್ವ” ಕೃತಿ ಲೋಕಾರ್ಪಣೆ ಕಾರ್ಯಕ್ರಮ ಪಟ್ಟಣದ ಜ್ಞಾನಭಾರತಿ ಕಾಲೇಜಿನ ಸಭಾಂಗಣದಲ್ಲಿ ನ.11ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಗ್ರಂಥ…

ಬಳ್ಳಾರಿ: ಹಾವಂಬಾವಿ ಸರಕಾರಿ ಶಾಲೆಯಲ್ಲಿ ಸಂಭ್ರಮದ ರಾಜ್ಯೋತ್ಸವ

ಬಳ್ಳಾರಿ, ನ.೧: ನಗರದ ಹಾವಂಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 66ನೇ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಿಕ್ಷಣ ಪ್ರೇಮಿ ಬಾಬುರಾವ್ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರೂ ಆದ ಶಾಲೆಯ…

ಸುಪಾರಿ, ಬ್ಲಾಕ್ ಮೇಲ್ ಜರ್ನಲಿಸ್ಟ್ ಗಳ ಬಗ್ಗೆ ಎಚ್ಚರವಿರಲಿ: ಪತ್ರಿಕೆಗಳಿಗೆ ಓದುಗರ ವಿಶ್ವಾಸರ್ಹತೆ ಮುಖ್ಯ -ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್

ಬಳ್ಳಾರಿ, ನ.1: ಪತ್ರಿಕೆಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದರೆ ಓದುಗರ ವಿಶ್ವಾರ್ಸಹತೆ ಗಳಿಸಲು ಸಾಧ್ಯ ಎಂದು ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಅವರು ಹೇಳಿದರು. ಸೋಮವಾರ ನಗರದ ಬಿಡಿಎಎ ಸಭಾಂಗಣದಲ್ಲಿ ನೂತನ ಕಲ್ಯಾಣ ವಿಜಯ ದಿನಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು…

ಸಿರುಗುಪ್ಪದಲ್ಲಿ ‘ನಾವೆಲ್ಲರೂ ಭಾರತೀಯರು….’ ಬೃಹತ್ ಶಿಲಾ ಶಾಸನ ಉದ್ಘಾಟಿಸಿದ ಐಜಿಪಿ ಎಂ. ನಂಜುಂಡಸ್ವಾಮಿ

ಸಿರುಗುಪ್ಪ, ಅ. 29: ದೇಶಭಕ್ತಿ ಸಾರುವ ‘ನಾವೆಲ್ಲಾ ಭಾರತೀಯರು…’ ಘೋಷವಾಕ್ಯದ ಶಿಲಾಶಾಸನವನ್ನು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಐಜಿಪಿ ಎಂ. ನಂಜುಂಡಸ್ವಾಮಿ ಅವರು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿದರು. ತಾಲೂಕಿನ ಶಾಸವಾಸಪುರ ಗ್ರಾಮದ ಯುವ ಮುಖಂಡರುಗಳಾದ ಸಿ. ಶರಣಬಸಪ್ಪ, ಹೆಚ್. ಭಾಷಾ…