Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಸಿರುಗುಪ್ಪದಲ್ಲಿ 'ನಾವೆಲ್ಲರೂ ಭಾರತೀಯರು....' ಬೃಹತ್ ಶಿಲಾ ಶಾಸನ ಉದ್ಘಾಟಿಸಿದ ಐಜಿಪಿ ಎಂ. ನಂಜುಂಡಸ್ವಾಮಿ - Karnataka Kahale

ಸಿರುಗುಪ್ಪದಲ್ಲಿ ‘ನಾವೆಲ್ಲರೂ ಭಾರತೀಯರು….’ ಬೃಹತ್ ಶಿಲಾ ಶಾಸನ ಉದ್ಘಾಟಿಸಿದ ಐಜಿಪಿ ಎಂ. ನಂಜುಂಡಸ್ವಾಮಿ

ಸಿರುಗುಪ್ಪ, ಅ. 29: ದೇಶಭಕ್ತಿ ಸಾರುವ ‘ನಾವೆಲ್ಲಾ ಭಾರತೀಯರು…’ ಘೋಷವಾಕ್ಯದ ಶಿಲಾಶಾಸನವನ್ನು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಐಜಿಪಿ ಎಂ. ನಂಜುಂಡಸ್ವಾಮಿ ಅವರು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿದರು.


ತಾಲೂಕಿನ ಶಾಸವಾಸಪುರ ಗ್ರಾಮದ ಯುವ ಮುಖಂಡರುಗಳಾದ ಸಿ. ಶರಣಬಸಪ್ಪ, ಹೆಚ್. ಭಾಷಾ ಮತ್ತು ಎ. ರಾಘವೇಂದ್ರ ಅವರು 14 ಟನ್ ಬೃಹತ್ ಗ್ರಾನೈಟ್ ಶಿಲೆಯಲ್ಲಿ ಸಾಹಿತಿ ಮನಂ ಅವರ ಘೋಷಾ ವಾಕ್ಯವನ್ನು ಕೆತ್ತಿಸಿ ಅಭಿಮಾನ ಮೆರೆದಿದ್ದಾರೆ.


ಮೋಕಾದ ವಿ. ರಾಮಣ್ಣ ಅವರು ಈ ಶಿಲಾಶಾಸನ ವಿನ್ಯಾಸಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಪಿಐ ಪವಾರ್, ಮುಖಂಡರಾದ ಬಿ.ಎಂ. ಸತೀಶ್, ಬಿಇಓ ಪಿ.ಡಿ. ಭಜಂತ್ರಿ, ಪುರಸಭೆ ಸದಸ್ಯ ಗಣೇಶ್, ಚಿಟಿಕೆ ಹುಸೇನ್, ಶ್ರೀಧರಗಡ್ಡೆ ಯಲ್ಲಪ್ಪ,ಮನೆ ಹಿಂದಿನ ಈರಪ್ಪ, ಎತ್ತಿನಟ್ಟಿ ನಾಗರಾಜ್, ನಡುವಿ ರಾಮಣ್ಣ, ಬೈಲೂರು ನಾಗರಾಜ್, ಕಾಳೆ ತಾಯಪ್ಪ, ಬೈಲೂರು‌ ಮಲ್ಲಿಕಾರ್ಜುನ್, ಶೇಖರ್ ಕುರುವಳ್ಳಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ವಿನ್ಯಾಸಕಾರ ವಿ. ರಾಮಣ್ಣ ಅವರನ್ನು ಸಂಘಟಕರ ಪರವಾಗಿ ಐಜಿಪಿ ನಂಜುಂಡಸ್ವಾಮಿ ಅವರು ಸನ್ಮಾನಿಸಿ ಗೌರವಿಸಿದರು.

*****