ಯಾಕೆ? ಏನು? ಹೇಗೆ? ಯಾಕೆ? ಏನು? ಹೇಗೆ? ಅದಕ್ಕೇ…ಏನಿಲ್ಲ…ಹಾಗೇ…. ಗೊತ್ತಾಗುವುದಿಲ್ಲ ಎಷ್ಟೊಂದು ಆಳ ಅಗಲ ಅವಕಾಶ , ಆಕಾಶ….. ತೋರಿಕೆಯ ಮೇಲ್ಪದರದ ಕೆಳಗೆ ಎಷ್ಟೊಂದು ಪದರಗಳ ಮಡಿಕೆ ಸುರುಳಿ ಸುತ್ತಿ ಮಲಗಿ ಮಲಗಿದ್ದಲ್ಲಿಯೇ ಸಡಿಲಗೊಳ್ಳುತ್ತದೆ ಚಡಪಡಿಕೆಗೆ ಹುಡಿ ಮಣ್ಣು ಅಹಮಿಕೆಗೋ ಅವಮಾನಕ್ಕೋ…
Category: ರಾಜ್ಯ
ಅನುದಿನ ಕವನ-೩೯೮, ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕವನದ ಶೀರ್ಷಿಕೆ: ಅವನಿಗೊಂದು ಪತ್ರ
ಅವನಿಗೊಂದು ಪತ್ರ ಅಚ್ಚರಿಗಳ ಅಕ್ಷಯಪಾತ್ರೆ ಅವನಿ ನಿನ್ನ ನಿಗೂಢ ನಡೆಯನರಿಯಲು ನಾ ಸೋತೆ, ಅಲ್ಲಲ್ಲ ನಾವು ಸೋತೆವು ಕ್ಷಮಿಸಿ ಬಿಡು ನಮ್ಮನು. ನೂರು ನೋವನು ನುಂಗುತ ಸಕಲ ಜೀವಕೆ ಆಶ್ರಯವನೀಯುವ ನಿಸ್ವಾರ್ಥದ ನಿನ್ನನರ್ಥ ಮಾಡಿಕೊಳ್ಳಲಿಲ್ಲ ಕ್ಷಮಿಸಿ ಬಿಡು ನಮ್ಮನು. ಮನತಣಿಸು ನಿನ್ನ…
ಅನುದಿನ ಕವನ-೩೯೭, ಕವಿ:ಟಿ.ಪಿ. ಉಮೇಶ್, ಅಮೃತಾಪುರ, ಚಿತ್ರದುರ್ಗ, ಕವನದ ಶೀರ್ಷಿಕೆ: ಗಾಂಧಿ ಗುರುತು
ಗಾಂಧಿ ಗುರುತು ಅರಳಿದ ಹೂಗಳ ಗಮನಿಸಿರಿ ಮಕ್ಕಳ ನಗುವ ಆಸ್ವಾದಿಸಿರಿ ರೈತರ ಮೈ ಬೆವರ ಸಹಿಸಿರಿ ಹೆಂಗಳೆಯರ ಮಾತ ಆಲಿಸಿರಿ ಮಣ್ಣ ಕಣಕಣ ಪೂಜಿಸಿರಿ ಸಿಗುವನು…. ಎಲ್ಲ ಗೆರೆಗಳಿಗೆ ಸಿಕ್ಕವನು ಎಲ್ಲ ನುಡಿಗಳಿಗೆ ದೊರೆತವನು ಎಲ್ಲ ಪದಗಳಿಗೆ ಒಲಿದವನು ಎಲ್ಲ ಎಲ್ಲೆಗಳಿಗೆ…
ಅನುದಿನ ಕವನ-೩೯೬, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಇರುವೆ ನಾನಿರುವೆ
ಇರುವೆ ನಾನಿರುವೆ ನಾನು ನಾನಾಗಿಯೇ ಇರುವೆ ದೂರದಲ್ಲಿ ನಾನು ನನಗಾಗಿಯೇ ಇರುವೆ ಹತ್ತಿರದಲ್ಲಿ ನೀನೂ ನನ್ನೊಳಗೆ ಇರುವೆ ಕೈಗೆ ಸಿಗದಷ್ಟು ದೂರದಲ್ಲಿ ಮನಸ್ಸಿಗೆ ಸದಾ ಸಿಗುವಷ್ಟು ಹತ್ತಿರದಲ್ಲಿ ನಾನಿರುವೆ ನಮ್ಮಿಬ್ಬರ ಯಾರೂ ಅರಿಯಲಾರದಷ್ಟು ದೂರದಲ್ಲಿ ನಮ್ಮಿಬ್ಬರ ಗೆಳೆತನ ಕಣ್ಮರೆಯಾಗದಷ್ಟು ಹತ್ತಿರದಲ್ಲಿ ನಾನಿರುವೆ…
ಅನುದಿನ ಕವನ-೩೯೫, ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ, ಕಾವ್ಯ ಪ್ರಕಾರ: ಮುಕ್ತಕಗಳು
ಮುಕ್ತಕಗಳು ಧರಣಿಯಲಿ ಸವಿಸುಖವು ಮನದಲ್ಲಿ ತುಂಬಿರಲು ಭರಪೂರ ಭರವಸೆಯು ನಾಳೆದಿನಕೆ ಸರಿಯುವವು ದಿನಗಳವು ಸುಲಲಿತವು ಸಂತಸದಿ ಹರಿದಯೆಯು ನಮಗಿರಲು ‐ಧರಣಿದೇವಿ ಧರಣಿಯಲಿ ಬರವುಂಟು ಗುಣವುಳ್ಳ ಮನುಜರಿಗೆ ಜರುಗುವವು ಬಗೆಬಗೆಯ ಹೀನತನವು ಮರೆತಿರಲು ಮನುಷ್ಯರು ಮಾನವಿಯ ಮೌಲ್ಲವ ಗುರುತಿಸಲು ಬಲುಕಷ್ಟ-ಧರಣಿದೇವಿ ಧರಣಿಯಲಿ ನಡೆದಿಹವು…
ಡಾ.ಮಹೇಶ ಜೋಷಿ ಅವರು ಕಸಾಪ ಮೂಲ ಅಸ್ಮಿತೆ ಕಾಪಾಡಲಿ – ಸಾಹಿತಿ ಸಿದ್ದು ಯಾಪಲಪರವಿ, ಕಾರಟಗಿ ಬಹಿರಂಗ ಪತ್ರ
ಅಧ್ಯಕ್ಷರು ಕಸಾಪ ಮೂಲ ಅಸ್ಮಿತೆ ಕಾಪಾಡಲಿ ರಾಜ್ಯ ಕಸಾಪ ಅಧ್ಯಕ್ಷರ ಪ್ರತಿ ನಿತ್ಯದ ಹೇಳಿಕೆಗಳು ರಾಜಕೀಯ ಸ್ವರೂಪ ಪಡೆದು ಸಾಹಿತ್ಯ ಪರಿಷತ್ತಿನ ಆಶಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ. ಸೆಲೆಬ್ರಿಟಿ ಅಂದುಕೊಂಡವರು, ಸಾಹಿತ್ಯ, ಸಂಸ್ಕೃತಿಯ ಮೂಲ ಉದ್ದೇಶವನ್ನು ಸರಿಯಾಗಿ ಗ್ರಹಿಸದೇ ಹೋದರೆ ಅಪಾಯ…
ಅನುದಿನ ಕವನ-೩೯೪, ಕವಿ:ರಘೋತ್ತಮ ಹೊ.ಬ, ಮೈಸೂರು, ಕವನದ ಶೀರ್ಷಿಕೆ: ಜಾತಿ ಇಲ್ಲದ….
ಜಾತಿ ಇಲ್ಲದ… ಹೊಸ ಜಾಗಕ್ಕೆ ಬಂದೆ ಹಳೆಯ ಜಾಗದ ಬಗ್ಗೆ ಪಶ್ಚಾತ್ತಾಪವಿಲ್ಲ ಜಾತಿ ಇರುವ ಜಾಗ ಹಳೆಯದಾದರೇನು ಹೊಸದಾದರೇನು ದೂರದ್ದಾದರೇನು ಹತ್ತಿರದದ್ದಾದರೇನು ನಮ್ಮೂರೇ ಆದರೆ ಏನು ಪರ ಊರೇ ಆದರೆ ಏನು ಜಾತಿ ಹೀನನ ಮನೆಯ ಜ್ಯೋತಿಯ ಹುಡುಕುತ ಹೊರಟವಗೆ ಹಳೆಯದು…
ಅನುದಿನ ಕವನ-೩೯೩, ಕವಿ:ಶಶಿ ಸಂಪಳ್ಳಿ, ಸಾಗರ, ಶಿವಮೊಗ್ಗ
ಒಂಟಿ ಎನಿಸುವ ಮುನ್ನ ಅಲ್ಲೊಂದು ಕಿರುಬೆರಳಿದೆ ಎಂಬುದ ನೆನಪಿಸಿಕೋ… ಖಾಲಿ ಎನಿಸುವ ಮುನ್ನ ಬದಿಯಲ್ಲೆ ಪುಟ್ಟ ಕೊಳವಿದೆ ಎಂಬುದ ಮರೆಯದಿರು… ಪ್ರತಿ ಬಾರಿ ಕಣ್ಣಂಚಿನಲಿ ನೀರಾಡುವ ಮುನ್ನ; ತಲೆಯ ಮೇಲೆ ವಿಶಾಲ ಆಕಾಶವಿದೆ ಮತ್ತು ಅಲ್ಲೂ ಒಂಟಿ ತಾರೆಗಳು ಮಿನುಗುತ್ತಿವೆ ಎಂಬುದು…
ಅನುದಿನ ಕವನ-೩೯೨, ಕವಯತ್ರಿ: 🖊️ವಿನಿಶಾಗೋಪಿನಾಥ್, ಬೆಂಗಳೂರು
ಕನಸಿನ ಕನವರಿಕೆಯಲ್ಲ ಪ್ರೀತಿ ತುಂಬಿ ಹರಿಯುವ ನದಿ ಮಂದಿಯ ಮಾತಿಗೆ ಹೆದರಿ ನಿರಾಶೆಯ ಮೋಡ ಕಟ್ಟಿಕೊಳ್ಳಬೇಕೇಕೆ ಪ್ರೇಮಿಗಳು? ಪಥ ಬದಲಿಸಬೇಕೇಕೆ ಹೆದರಿ? ಮಂದಿಗೆ ಬೇರೇನು ಕೆಲಸ? ಬಣ್ಣದ ಕತೆ ಕಟ್ಟುವುದು ಮುಳ್ಳಿನ ಬೇಲಿ ಹೆಣೆಯುವುದು ನೆಗೆದು ಹಾರಬೇಕು ಮಳೆಬಿಲ್ಲಿನ ಲೋಕಕೆ ಬಿಲ್ಲಿನ…
ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸಿದೆ -ಎಲ್.ಐ.ಸಿ ಶಾಖಾಧಿಕಾರಿ ತಳವಾರ್
ಬೆಂಗಳೂರು, ಜ.26: ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾಸಾಹೇಬ್ ಡಾ.ಬಿ. ಆರ್ ಅಂಬೇಡ್ಕರ್ ಅವರು ರಚಿಸಿರುವ ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬರಿಗೂ ಸಮಾನತೆ ಹಾಗೂ ಗೌರವದಿಂದ ಬದುಕುವ ಹಕ್ಕನ್ನು ಕಲ್ಪಿಸಿದೆ ಎಂದು ಭಾರತೀಯ ಜೀವ ವಿಮಾ ನಿಗಮದ ಶಾಖಾಧಿಕಾರಿ ಗಾಳೆಪ್ಪ ತಳವಾರ ಅವರು…
