ಜನಮನ [ಅಭಿಪ್ರಾಯ: ಮಲ್ಲಿಕಾರ್ಜುನಸ್ವಾಮಿ ಹಿರೇಮಠ(ಮಹಿಮ), ನಿವೃತ್ತ ಡಿಡಿಪಿಐ ರಾಯಚೂರು]

ಶಿಕ್ಷಕರು ಅಯೋಗ್ಯರಲ್ಲ.ಖಂಡಿತವಾಗಿ ಅವರು ಶಿಕ್ಷಣ ತಜ್ಞರು.. ಯೋಜನೆ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಅವರ ಕಡೆಗಣನೆ ಸಲ್ಲ.. ಅವರನ್ನು ಕಡೆಗಣಿಸಿ ಕಾರ್ಯಕ್ರಮಗಳನ್ನು ಏಕಪಕ್ಷೀಯವಾಗಿ ಎನ್ ಜಿ ಓ ಗಳ ಸಲಹೆಯಂತೆ ಅವರ ಯೊಜನೆಗಳಂತೆ ರೂಪಿಸಿದಲ್ಲಿ ಯಾವುದೇ ಕಾರ್ಯಕ್ರಮಗಳು ಸಫಲವಾಗುವುದಿಲ್ಲ..ಇದನ್ನು ಇಂದು ನಾವು ಮನಗಾಣಬೇಕಿದೆ. ನಾವು…

ಅನುದಿನ ಕವನ-೧೫೩, ಕವಿ:ಮಹಿಮ, ಹಂದ್ಯಾಳ್ ಕವನದ ಶೀರ್ಷಿಕೆ:ನಿಶ್ಯಬ್ಧ

ನಿಶ್ಯಬ್ಧ ಈಗ ನಿಶ್ಯಬ್ದ ಮಳೆ ಬಂದರೆ ಸಾಕು ಎಲ್ಲೋ ಅಡಗಿದ್ದ ಕಪ್ಪೆಗಳ ಸಮೂಹ ಗಾಯನ ಎತ್ತರದ ದನಿಯಲ್ಲಿ ಅದು ಖುಷಿಗೋ ಮಳೆಯರಾಯನಿಗೆ ಜಯಘೋಷವೋ ಕೃತಜ್ಞತೆಯೋ ಬಿಸಿಲ ಝಳದ ನಮ್ಮ ಭುವಿಯಲ್ಲಿ ಎಲ್ಲಿ ಅಡಗಿಹವೋ ಮೌನವಹಿಸಿ ವಟಗುಟ್ಟುವ ಕಪ್ಪೆಗಳು ಸಾವಿಂಗೆ ಹೆದರಿ ದೇವಂಗೆ…

ಅನುದಿನ ಕವನ-೧೫೨, ಕವಿ:ನಾಗತಿಹಳ್ಳಿ ರಮೇಶ್, ಬೆಂಗಳೂರು, ಕವನದ ಶೀರ್ಷಿಕೆ: ಘಮಲು

ಘಮಲು ……… ಹೂವನು ಮುಚ್ಚಿಡಬಹುದು ಕಂಪನು ಬಚ್ಚಿಡಬಹುದೆ? ಮುತ್ತನು ಮುಚ್ಚಿಡಬಹುದು ನಾಚಿಕೆ ಬಚ್ಚಿಡಬಹುದೆ? ದೀಪವ ಮುಚ್ಚಿಡಬಹುದು ಸೂರ್ಯನ ಬಚ್ಚಿಡಬಹುದೆ? ಆನೆಯ ಪಳಗಿಸಬಹುದು ಅಂಕುಶದ ಮೊನೆಯಲ್ಲಿ ಹಕ್ಕಿಯ ಬಂದಿಸಬಹುದು ಪಂಜರದ ನೆರಳಲ್ಲಿ ಮಾನವನಾ ಬಗ್ಗಿಸಬಹುದು ಆಸೆಯ ಇಕ್ಕಳದಲ್ಲಿ ಇರುವೆಗೆ ಖೆಡ್ಡಾ ತೋಡಿದರೆ ಹೆರಿಗೆ…

ಎಸ್ ಎಸ್ ಎಲ್ ಸಿ ಪರೀಕ್ಷೆ ಗಳನ್ನು ತಕ್ಷಣ ರದ್ದು ಪಡಿಸಲು ಆಗ್ರಹಿಸಿ ರಾಜ್ಯಪಾಲರು, ಮುಖ್ಯಮಂತ್ರಿಗೆ ಪೋಷಕರ ನಿಯೋಗ ಮನವಿ

ಧಾರವಾಡ : ರಾಜ್ಯದಲ್ಲಿ ಪ್ರಸಕ್ತ ಸಾಲಿಗೆ ಒಟ್ಟು 8.71 ಲಕ್ಷ ಕ್ಕೂ ಅಧಿಕ ಎಸ್ ಎಸ್ ಎಲ್ ಸಿ ಮಕ್ಕಳು ಹಾಗೂ ಅವರ ಪೋಷಕರ ಜೊತೆಗೆ ರಾಜ್ಯದ ಶಿಕ್ಷಣ ಸಚಿವ ಸುರೇಶಕುಮಾರ ಅವರು ಚೆಲ್ಲಾಟವಾಡದೆ ತಕ್ಷಣವೇ ಪರೀಕ್ಷೆ ರದ್ದುಪಡಿಸಲು ಸೂಚಿಸಬೇಕು ಎಂದು…

ಅನುದಿನ ಕವನ-೧೫೧ ಕವಿ: ಎ.ಎನ್ ರಮೇಶ್ ಗುಬ್ಬಿ ಕವನದ ಶೀರ್ಷಿಕೆ: ಮಹಂತ!

ನಿನ್ನೆ ಒಬ್ಬರು ಮೆಸೇಜ್ ಮಾಡಿ “ಮಹಂತ” ಅಂದರೆ ಯಾರು? ಕಾವ್ಯಾತ್ಮಕವಾಗಿ ಉತ್ತರಿಸಿ ಎಂದರು. ಆ ಉತ್ತರವೇ ಈ ಕವಿತೆ.                                 …

ಅನುದಿನ ಕವನ-೧೫೦, ಕವಿ:ಮನಂ(ಮಳವಳ್ಳಿ ನಂಜುಂಡಸ್ವಾಮಿ ಐಪಿಎಸ್) ಕವನದ ಶೀರ್ಷಿಕೆ:ನನ್ನ ಕಾವ್ಯ ಕನ್ನಿಕೆ ಯಾರು?

ಕರ್ನಾಟಕ ಕಹಳೆ ಡಾಟ್ ಕಾಮ್’ ನ ವಿಶೇಷ, ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 150 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ. ಈ ನೂರಾ ಐವತ್ತು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ…

ಅನುದಿನ ಕವನ-೧೪೯ ಕವಿ:ನೀ.ಶ್ರೀಶೈಲ ಹುಲ್ಲೂರು, ಕವನದ ಶೀರ್ಷಿಕೆ:ಚೆಲುವಿನಮಲು

ಚೆಲುವಿನಮಲು ***** ಆ ಆಳ ಕಂಗಳ ಮಧುರ ನೋಟಕೆ ಎಲ್ಲಿ ಮರುಳಾಗಿ ಬಿಡುವೆನೇನೋ? ಚೆಂದುಟಿಯೊಲವ ನವಿರು ಗಾನಕೆ ಎಲ್ಲಿ ಕೊರಳಾಗಿ ಬಿಡುವೆನೇನೋ? ಆ ಜೊಂಪು ಜೊಂಪು ನೀಳ ಕೇಶರಾಶಿಗೆ ಎಲ್ಲಿ ಹೂವಾಗಿ ಬಿಡುವೆನೇನೋ? ಸಂಪಿಗೆನಾಸಿಕದ ಆ ರಮ್ಯ ಸೊಬಗಿಗೆ ಎಲ್ಲಿ ಘಮವಾಗಿ…

ಅನುದಿನ ಕವನ-೧೪೮. ಕವಿ: ಟಿ.ಕೆ ಗಂಗಾಧರ ಪತ್ತಾರ, ಕವನದ ಶೀರ್ಷಿಕೆ: ಕ..ಕಾ.. ಬಳ್ಳಿಯಲ್ಲಿ ಕನ್ನಡ ಕವನ ಕುಸುಮ

ಹಿರಿಯ ಕವಿ ಟಿ. ಕೆ ಗಂಗಾಧರ ಪತ್ತಾರ ಅವರು ೫೦ ವರ್ಷಗಳ ಹಿಂದೆ ೧೯೭೦ರಲ್ಲಿ ಪಿಯುಸಿ ಓದುತ್ತಿದ್ದಾಗ ರಚಿಸಿದ ಕವಿತೆ. ಇದರ ಪ್ರತಿಸಾಲಿನ ಮೊದಲಕ್ಷರ ಮೇಲಿನಿಂದ ಕೆಳಕ್ಕೆ ಕ….ಕಾ….ಕಿ…..ಕೀ……..ಕಂ…ಕ: ಬರುತ್ತವೆ. ಕ..ಕಾ.. ಬಳ್ಳಿಯಲ್ಲಿ ಕನ್ನಡ ಕವನ ಕುಸುಮ ~~~~~~~~~~~~~~~~~~~~ ಕನ್ನಡಾಂಬೆಯೆ ಅನ್ನಪೂರ್ಣೆಯೆ…

ಅನುದಿನ ಕವನ-೧೪೭ ಕವಿ:ಡಾ. ಸತೀಶ್ ಕುಮಾರ ಹೊಸಮನಿ, ಕವನದ ಶೀರ್ಷಿಕೆ: ಬೆಳಕಿನ ಸೂರ್ಯ

ಬೆಳಕಿನ ಸೂರ್ಯ ***** ಲುಂಬಿನಿಯಲಿ ಹುಟ್ಟಿ ಅಷ್ಟಾಂಗಿಕ ಮಾರ್ಗ ತೋರಿಸಿದ ದಾರ್ಶನಿಕ ದುಃಖದಿಂದ ಹೊರ ಬಾ ಎಂದು ಧಮ್ಮ ತೋರಿಸಿದವನು ಅರಿವಿನ ಗುರುವಾದೆ ಮುಕ್ತಿ ಮಾರ್ಗವ ತೋರಿದೆ ಜ್ಞಾನ ಯೋಗಿಯಾಗಿ ಬೆಳಕ ನೀಡಿದೆ ಶಾಂತಿ ನೆಮ್ಮದಿ ತೋರಿದೆ ಕರುಣೆ ದಯೆ ಅನುಕಂಪ…

ಅನುದಿನ ಕವನ:೧೪೬, ಕವಯತ್ರಿ:ರಂಹೊ(ರಂಗಮ್ಮ ಹೊದೇಕಲ್). ಕವನದ ಶೀರ್ಷಿಕೆ: ಬುದ್ಧ

ಬುದ್ಧ ಬುದ್ಧ ಚಿತ್ರಗಳಲಿಲ್ಲ ನೋಟದಲ್ಲಿದ್ದಾನೆ! ಬುದ್ಧ ಗೋಡೆಯ ಮೇಲೆ ತೂಗುವುದಿಲ್ಲ ಎದೆಯೊಳಗೆ ಜೀಕುತ್ತಾನೆ! ಬುದ್ಧ ಮಾತುಗಳ ಮೆರವಣಿಗೆಯಲ್ಲಿಲ್ಲ ಮೌನದಲ್ಲಿದ್ದಾನೆ! ಬುದ್ಧ ಕಿತ್ತುಕೊಳ್ಳುವುದರಲ್ಲಿಲ್ಲ ಕೊಟ್ಟು ಸುಖಿಸುವುದರಲ್ಲಿದ್ದಾನೆ! ಬುದ್ಧನೆಂದರೆ ಮತ್ತೇನು ತಾಯಿಯೂ…. ಮಗುವೂ……!! -ರಂಹೊ, ತುಮಕೂರು *****   ರಂಗಮ್ಮ ಹೊದೇಕಲ್(ರಂಹೊ)