ಬಾಬಾ ಸಾಹೇಬರ ನೆನಪಿನೊಂದಿಗೆ……… ಕಂಗಳ ಸೂರ್ಯ ಅದೆಷ್ಟೋ ಶತಮಾನಗಳಿಂದ ಆಗಸವನ್ನೇ ನೋಡದೆ ನಡೆಯುತ್ತಿದ್ದರವರು ತಮ್ಮತನವನೆಲ್ಲ ಯಾರದೋ ಪಾದಗಳ ಧೂಳಾಗಿಸಿ ಕಂಬನಿಗಳ ಕಡಲನ್ನೇ ಬಾಯಾರಿಕೆಯ ತಣಿವನ್ನಾಗಿಸಿ ನಡೆಯುತ್ತಲೇ ಇದ್ದರು ಸೂರ್ಯ ಚಂದಿರರನ್ನೂ ನೋಡದಂತೆ ತಮ್ಮ ಮುಖಗಳು ತಮಗೇ ತಿಳಿಯದಂತೆ ಅದೆಷ್ಟು ನೋವುಗಳು ಯಾತನೆಗಳು…
Category: ರಾಜ್ಯ
ಅನುದಿನ ಕವನ-೭೦೫, ಕವಿ: ಸಿದ್ದು ಜನ್ನೂರು, ಚಾಮರಾಜನಗರ. ಕವನದ ಶೀರ್ಷಿಕೆ: ಪ್ರತಿಬಾರಿ ಪ್ರತಿರೋಧ….!
ಪ್ರತಿಬಾರಿ ಪ್ರತಿರೋಧ….! ಹೌದು…. ಪ್ರತಿಬಾರಿ ಪ್ರತಿರೋಧ ಒಡ್ಡಿದೇವೆ ಹಲವು ನೆಪದಲ್ಲಿ ಒಟ್ಟುಗೂಡಿದ್ದೇವೆ ಒಡೆದು ಹೋಳಾಗಿ ಹೋಗಿದ್ದೇವೆ ಈ ಬಾರಿಯು ಅದೇ…ಕಾದು ನೋಡುವ… ದಬ್ಬಾಳಿಕೆಗಳಾದಾಗ ಅತ್ಯಾಚಾರಗಳಾದಾಗ ನಮ್ಮ ಹಕ್ಕುಗಳ ಕಸಿದುಕೊಂಡಾಗ ಆಕ್ರಮಣಗಳಾದಾಗ ಬಾರಿ ಹೋರಾಟ ಕಟ್ಟಿ ಪ್ರತಿರೋಧ ತೋರಿದ್ದೇವೆ ನಂತರ ತೆಪ್ಪಗೆ ಮನೆ…
ಅನುದಿನ ಕವನ-೭೦೪, ಕವಿ: ಹೊಸಪೇಟೆ ವಿಕ್ರಮ ಬಿ.ಕೆ, ಬೆಂಗಳೂರು, ಕವನದ ಶೀರ್ಷಿಕೆ: ಸಾಲಗಾರ
ಸಾಲಗಾರ ಒಳಗೆ ಕಾಡಿ ಬೇಡಿ ಕಿರಿಚಿ ಪರಚಿ ಭಾವಲೋಕ ಹೊಡೆದು ನಿಟ್ಟುಸಿರು ಬಿಡುವ ಕವನ ಶಾಂತಿಯ ಸಾಲ ಕೊಡುವ ದಂಧೆ.. ಎಷ್ಟು ಕಾಲ ಪದಗಳಲ್ಲಿ ಸೇರಿ ಇರುವುದು? ಬಡ್ಡಿ ಹೆಚ್ಚು ಗಳಿಸುವ ಕಾತುರ ಓದುವ ಕಣ್ಣುಗಳಿಗೆ ಕಾದು ಮನಸಿನೊಳಗೆ ಜಿಗಿಯುತ್ತೆ; ಹೊಸಲೋಕ…
ಅನುದಿನ ಕವನ-೭೦೩, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ವಿಜಯನಗರ ಜಿಲ್ಲೆ, ಕವನದ ಶೀರ್ಷಿಕೆ: ಲಯದ ನಾದ
ಲಯದ ನಾದ ಕೆಂಪು ಬಸ್ಸಿನ ವೇಗದಿ ಕನಸ ಕಾಣುತಿದೆ ಭಂಡಾಯದ ಹೊಗೆ.. ವಿಚಿತ್ರ ತರ್ಕದ ಕೋಟುಗಳ ನಡುವೆ ಬಂದಿಯಾಗಿದೆ ಅಲುಗಾಡುವ ಹಸಿರ ಹುಲ್ಲು… ಭಾವನೆಯ ಒಡಾಟಕೆ ಹೊರಾಟವಿಲ್ಲದ ಮೂಕ ಪಕ್ಷಿಗಳು ಬೆಂಚುಗಳಲಿ ತಲೆಬಾಗಿವೆ…. ಇದಕೆ ಸೋತ ಷರಟುಗಳು ಮುಗಿಲ ನೋಡುತ ತಲೆ…
ಅನುದಿನ ಕವನ-೭೦೨, ಕವಿ: ಮಹಿಮ, ಹಂದ್ಯಾಳ್, ಬಳ್ಳಾರಿ ಜಿ. ಕವನದ ಶೀರ್ಷಿಕೆ: ಮುಪ್ಪು
ಮುಪ್ಪು ಸುಂದರಿಯ ವರಿಸಲು ಬಂದರು ಸಾವಿರಾರು ರಾಜರುಗಳು ಸಾಲು ಸಾಲಾಗಿ.. ಅವಳು ಯಾರನ್ನೂ ಒಪ್ಪಲಿಲ್ಲ.. ಹೇ ಕುರೂಪಿಗಳಾ ಅಂದುಬಿಟ್ಟಳು.. ಕೊನೆಗೆ ಓರ್ವ ರಾಜ ಬಂದವಳೆದುರು ನಿಂತ ಸುಂದರಿ ಅವನ ನೋಡುತ್ತಲೇ ಬೆಚ್ಚಿ ಬೆದರಿ ದಿಕ್ಕೆಟ್ಟು ಓಡಿದಳು.. ರಾಜ ಬಿಡಲಿಲ್ಲ ಹಿಂಬಾಲಿಸಿ ಅವಳ…
ಅನುದಿನ ಕವನ-೭೦೧, ಕವಿ:ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಬುದ್ದ ಇನ್ನೂ ಅರ್ಥವಾಗಿಲ್ಲ….!
ಬುದ್ದ ಇನ್ನೂ ಅರ್ಥವಾಗಿಲ್ಲ….! ಮೇಲುಕೀಳಿನ ಅಸಹ್ಯವೆಲ್ಲವ ತಲೆಗೇರಿಸಿಕೊಂಡು ಜಾತಿಪಿತ್ತವ ಮುಡಿಕಟ್ಟಿಕೊಂಡು ನಲ್ಲಿ ತೊಂಬೆ ತೊಳೆದು ಸ್ವಚ್ಛಗೊಳಿಸಿ ಶುದ್ದವಾದವೆಂದ ಕೊಳಕು ಮನುಷ್ಯರಿಗೆ ನೀನು ಅರ್ಥವಾಗುವುದಿಲ್ಲ ಗುರುವೆ…. ನಿನ್ನ ಅನುಸರಿಸುತ್ತೇವೆಂದು ನೆಪಮಾತ್ರಕ್ಕೆ ಬೊಗಳೆ ಬಿಡುವ ಸಿದ್ದಾಂತಿಗಳಿಗೆ ಭಾಷಣ ಮುಗಿಯುತ್ತಿದಂತೆ ಬಣ್ಣಮಾತು ಬದಲಿಸುವವರಿಗೆ ನೀನು ಅರ್ಥವಾಗುವುದಿಲ್ಲ…
ಅನುದಿನ ಕವನ-೭೦೦, ಕವಯಿತ್ರಿ:ವಿ ನಿಶಾಗೋಪಿನಾಥ್, ಬೆಂಗಳೂರು, ಕವನದ ಶೀರ್ಷಿಕೆ: ಅಪ್ಪ
ಅಪ್ಪ ಮೇಲುನೋಟಕ್ಕೆ ಒರಟಾಗಿ ಕಾಣುವ ಅಪ್ಪ. ಹೂವು ಹಣ್ಣು ತೆನೆ ಜೊತೆ ಸಂಬಂಧ…
ಅನುದಿನ ಕವನ-೬೯೯, ಕವಿ: ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಮಕ್ಕಳಗಜಲ್
ಮಕ್ಕಳ ಗಜಲ್ ಮಕ್ಕಳ ಮನದಲಿ ಕನಸು ಮೊಳೆಯಲು ಬಿಡಿ ಗೆಳೆಯರಲಿ ಕುಣಿದು ಹರಟುತ ನಗಲು ಬಿಡಿ. ಜಿಟಿಜಿಟಿ ಮಳೆಯ ಖುಷಿಗೆ ನಲಿಯಲು ಬಿಡಿ ಬಣ್ಣದ ಚಿಟ್ಟೆಯ ಮೋಹಕೆ ಕರಗಲು ಬಿಡಿ. ಕಾಗದದ ದೋಣಿ ನೀರಲಿ ಹರಿಸಲು ಬಿಡಿ ತಣ್ಣನೆಯ ಗಾಳಿಗೆ ಹಗೂರಕೆ…
ಅನುದಿನ ಕವನ-೬೯೮ (2ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕರ್ನಾಟಕ ಕಹಳೆ ಡಾಟ್ ಕಾಮ್) ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಕರ್ನಾಟಕ ಕಹಳೆ, ರಾಗ ಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ
ಹೆಮ್ಮೆಯ ಕನ್ನಡಿಗರ ಕೊರಳ ದನಿಯಾಗಿರುವ ಕರ್ನಾಟಕ ಕಹಳೆ ಡಾಟ್ ಕಾಮ್ ಯಶಸ್ವಿಯಾಗಿ ಮೂರನೇ ವರ್ಷಕ್ಕೆ ಹೆಜ್ಜೆ ಇಟ್ಟಿದೆ. ಎರಡು ವರ್ಷಗಳ ಹಿಂದೆ ಇದೇ ದಿನ ನ. 29ರಂದು ಬಳ್ಳಾರಿ ವಲಯದ ಐಜಿಪಿ(ಪ್ರಸ್ತುತ ಎಡಿಜಿಪಿ), ಸಾಹಿತಿ, ಸಂಶೋಧಕರಾದ ಶ್ರೀ ಎಂ. ನಂಜುಂಡಸ್ವಾಮಿ (ಮನಂ)…
ಅನುದಿನ ಕವನ-೬೯೭, ಕವಿ: ಮನಂ ಐಪಿಎಸ್, ಬೆಂಗಳೂರು, ಕವನದ ಶೀರ್ಷಿಕೆ: ಬದುಕೇ ಹಬ್ಬ, ಬಾಳೇ ಹಬ್ಬ.
ಬದುಕೇ ಹಬ್ಬ, ಬಾಳೇ ಹಬ್ಬ. ಮಟ್ಟಗೆ ಮರ್ಯಾದೆಯಾಗಿ ಬದುಕೊದು ಹಬ್ಬ, ಹಬ್ಬ ಬರೋದನ್ನ ಕಾಯೋದು ಹಬ್ಬ ಅಲ್ಲ, ಹಬ್ಬ ಬಂದಾಗ ಹಬ್ಬ ಮಾಡಿ ಹಬ್ಬ ಮರೆಯೊದಲ್ಲ. ಬದುಕೇ ಹಬ್ಬ, ಬಾಳೇ ಹಬ್ಬ. ಕುಣಿದು ಕುಪ್ಪಳಿಸೊದಷ್ಟೆ ಹಬ್ಬ ಅಲ್ಲ, ಬಾಡು ಗೀಡು ಮೇದು…
