ಅನುದಿನ ಕವನ-೮೭೦, ಕವಿ: ವಿಠೋಬಾ ಹೊನಕಾಂಡೆ, ಬೆಳಗಾವಿ, ಕವನದ ಶೀರ್ಷಿಕೆ: ಅನ್ನ ರಾಮಯ್ಯ

ಅನ್ನ ರಾಮಯ್ಯ

ಸಿದ್ದರಾಮನ ಹುಂಡಿಯಲಿ ಹುಟ್ಟಿ ಬೆಳೆದು
ಜನಪರ ಹೋರಾಟಕೆ ಹೆಗಲು ಕೊಟ್ಟು
ದೌರ್ಜನ್ಯಗಳ ಎದುರು ಮೆಟ್ಟಿ ನಿಂತು
ನೊಂದವರಿಗೆ ದನಿಯಾದ ಗಟ್ಟಿರಾಮಯ್ಯ
ಇವರು ನಮ್ಮರಾಮಯ್ಯ ll

ಹಸಿದವರಿಗೆ ಅನ್ನಭಾಗ್ಯ
ಮಕ್ಕಳಿಗೆ ಕ್ಷೀರ ಭಾಗ್ಯ
ಓದುವವರಿಗೆ ವಿದ್ಯಾಸಿರಿ
ರೈತರಿಗೆ ಕೃಷಿ -ಪಶುಭಾಗ್ಯ
ನಾಡು- ನುಡಿಯ ಬೆಳಗಿದ
ನಮ್ಮರಾಮಯ್ಯ
ಅನ್ನಭಾಗ್ಯ ರಾಮಯ್ಯ ll

ಜಾತಿ ಜನಸಂಖ್ಯೆ ಆಧಾರಿತ ಸಮಪಾಲು ನೀಡಿದ
ದನಿ ಇಲ್ಲದವರ ಪಾಲಿನ ಗುತ್ತಿಗೆದಾತ
ಸಾಮಾಜಿಕ ನ್ಯಾಯಕೆ ಶಕ್ತಿ ತುಂಬುತ
ಸಂವಿಧಾನದ ಆಶಯಗಳ ಜಾರಿಗೊಳಿಸಿದ
ನಮ್ಮರಾಮಯ್ಯ
‘ಭೀಮ’ರಾಮಯ್ಯ ll

ನೇರ ನುಡಿಯ ವ್ಯಕ್ತಿತ್ವದ ಧೀಮಂತಿಕೆಯ ನಾಯಕ
ನಡೆನುಡಿಯ ನಡುವೆ ಎಡವದ
ಜನರೆದೆಯಲಿ ಅನುರಾಗ ಪಡೆದ
ಆಡಂಬರವಿರದ
ನಿರಾತಂಕದ
ಜಗ್ಗದ ಕುಗ್ಗದ ಜನಪರ ಜೀವಯ್ಯ
ಸಮಾಜವಾದಿ ರಾಮಯ್ಯ ll

ಜಾತಿಗಿಂತ ಪ್ರೀತಿ ಮೇಲು
ಧರ್ಮಕಿಂತ ಮನುಷ್ಯತ್ವ ಮೇಲೆಂದು ನುಡಿದ,
ನುಡಿದಂತೆ ನಡೆಯುತ
ಮಾನವೀಯತೆಯೇ
ನಮ್ಮ ಧರ್ಮವೆಂದ
ನಮ್ಮರಾಮಯ್ಯ
ಸರ್ವಜನರ ರಾಮಯ್ಯ ll

ಅನ್ನರಾಮಯ್ಯ …
ಭಾಗ್ಯರಾಮಯ್ಯ…
ಭೀಮರಾಮಯ್ಯ…
ನೂರುಕಾಲ ಬಾಳಲಿ
ನಮ್ಮರಾಮಯ್ಯ


-ವಿಠೋಬಾ ಹೊನಕಾಂಡೆ, ಬೀದರ್
*****

Leave a Reply

Your email address will not be published. Required fields are marked *