ಅನುದಿನ ಕವನ-೮೮೭, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ. ಕಾವ್ಯ ಪ್ರಕಾರ: ತನಗಗಳು

ತನಗಗಳು


ಸ್ವಾಭಿಮಾನಕೆ ಬಿದ್ದು
ಶ್ವಾನನಂತಾಗಬೇಡ
ಇರುವ ಭಾಗ್ಯದಲಿ
ಸುಖದ ದಾರಿ ನೋಡ

ನಕ್ಕರದು ಷೋಡಸಿ
ಹತ್ತು ನೋವಿಗೆ ಮದ್ದು
ಹುಡುಗರೆದೆಯಲಿ
ನೂರು ನಗಾರಿ ಸದ್ದು

ಅವನು ಅವಳೊಳೋ
ಅವಳು ಅವನೊಳೋ
ಅವ್ಯಕ್ತ ಅನುಬಂಧ
ಪತಿ ಪತ್ನಿ ಸಂಬಂಧ

ಬದುಕು ಬಲು ಮಾಯೆ
ವಿಧಿ ಲಿಖಿತದಾಟ
ಪಾತ್ರಗಳು ನೂರೆಂಟು
ಸೂತ್ರದಾರ ಮೇಲುಂಟು


– ಸಿದ್ದಲಿಂಗಪ್ಪ ಬೀಳಗಿ, ಹುನಗುಂದ
*****

Leave a Reply

Your email address will not be published. Required fields are marked *