ಅನುದಿನ‌ ಕವನ-೯೮೧, ಕವಿ:ಎಸ್.ಕೌಸ್ತುಭ ಭಾರದ್ವಾಜ್, ಬಳ್ಳಾರಿ, ಕವನದ ಶೀರ್ಷಿಕೆ: ನಾಡು-ನುಡಿ

ನಾಡು–ನುಡಿ

ಕನ್ನಡ ತಾಯಿಯ
ಪುತ್ರರು ನಾವು
ನಮ್ಮೀ ಭಾಷೆಯ
ಬೆಳೆಸೋಣ

ಜಾತಿಯ ಮರೆತು
ಭಾಷೆಯ ನೆನೆದು
ಕನ್ನಡ ಆಸ್ತಿಯ
ಬೆಳೆಸೋಣ

ಸ್ವಾಭಿಮಾನ ಮೆರೆದು
ನನ್ನೀ ನಾಡು
ಬೆಳೆಯಬೇಕೆಂಬಂತೆ
ಕನ್ನಡ ಜಾಗೃತಿ
ಮಾಡೋಣ

ಭಾಷೆಯು ನಮ್ಮದು ಬೆಳೆಯಲೆಂದು,
ಕನ್ನಡ ಬಳಸಿ
ಕನ್ನಡ ಉಳಿಸಿ ಕನ್ನಡ ಬೆಳೆಸಿ

ಕೊಡುಗೆ ನೀಡು
ಭಾಷೆ ಉಳಿವುದು
ಜೀವ ಹೋದರು
ಹೆಸರು ಉಳಿವುದು

        -ಎಸ್.ಕೌಸ್ತುಭ ಭಾರದ್ವಾಜ್, ಬಳ್ಳಾರಿ

Leave a Reply

Your email address will not be published. Required fields are marked *