ಕಾವ್ಯ ಕಹಳೆ (೦೮-೦೪-೨೦೨೪), ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ಲು, ಕಾವ್ಯ ಪ್ರಕಾರ:ಗಝಲ್

ಕನ್ನಡದ ಗಝಲ್ ಪಿತಾಮಹ ಶಾಂತರಸರ ಜನುಮದಿನಕ್ಕೊಂದು ಗಝಲ್!

ಗಝಲ್

ಕನ್ನಡ ಸಾಹಿತ್ಯಕ್ಕೆ ಗಝಲನ್ನು ತರಿಸಿದವರು
ನೀವು
ಕನ್ನಡಿಕರಿಸಿ ಹೊಸ ಪರಂಪರೆ ಮೆರೆಸಿದವರು
ನೀವು

ಪಾಂಡಿತ್ಯಕೆ ಮುಕುಟಯಾಗಿ ಗಗನದಿ ಹೊಳೆವ
ಮಣಿ
ಕಂಡುಂಡ ಸತ್ಯಗಳ ಪದಗಳಲಿ ಸುರಿಸಿದವರು
ನೀವು

ಅದ್ವಿತೀಯ ಜ್ಞಾನದ ನಿಧಿ ಹಂಬೇರಾಳದ
ಶಾಂತರಸ
ಸದ್ವಿಚಾರಗಳ ಕಾವ್ಯ ಸಾಗರದಿ ಹರಿಸಿದವರು
ನೀವು

ಭುವನೇಶ್ವರಿಗೆ ನವೀನ ಪ್ರಕಾರದ ಗುಡಿಯ
ಕಟ್ಟಿದವರು
ಕವನ ಕಾವ್ಯದಲಿ ವಾಸ್ತವತೆಯ ಬೆರೆಸಿದವರು
ನೀವು

ಅಧ್ವರ್ಯುನ ತೆರದಲಿ ಭಾಷೆಯ ತೇರನು
ಎಳೆದವರು
ಅಧ್ವಗನಾದ ಅಭಿನವನಿಂದ ಚರಿತೆ ಬರೆಸಿದವರು
ನೀವು

-ಶಂಕರಾನಂದ ಹೆಬ್ಬಾಳ, ಇಳಕಲ್ಲು
—–

Leave a Reply

Your email address will not be published. Required fields are marked *