ವಾಲ್ಮೀಕಿ ನಾಯಕರ ಒಕ್ಕೂಟದಿಂದ ನೂತನ ಡಿಸಿ ನಾಗೇಂದ್ರ ಪ್ರಸಾದ್ ಅವರಿಗೆ ಸನ್ಮಾನ

ಬಳ್ಳಾರಿ:  ನೂತನ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರನ್ನು ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿ ಗೌರವಿಸಿತು.

ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ತಿಮ್ಮಪ್ಪ ಜೋಳದರಾಶಿ ಅವರ ನೇತೃತ್ವದಲ್ಲಿ ರಾಜ್ಯ ಉಪಾಧ್ಯಕ್ಷ ಹಗರಿ ಜನಾರ್ಧನ್ ನಾಯಕ, ಜಿಲ್ಲಾಧ್ಯಕ್ಷ ಯರಗುಡಿ ಮುದಿ ಮಲ್ಲಯ್ಯ , ಪ್ರಧಾನ ಕಾರ್ಯದರ್ಶಿ ಎನ್. ಸತ್ಯನಾರಾಯಣ ಅವರು ಸತ್ಕರಿಸಿದರು.              ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಬಿ. ಜಯರಾಮ್, ಸಮಾಜದ ಹಿರಿಯ ಮುಖಂಡರಾದ ಕಮಲಮರಿಸ್ವಾಮಿ, ಬಿ ಗೋವಿಂದ ರೂಪನಗುಡಿ, ಬಿ ರುದ್ರಪ್ಪ, ಕಾಯಿಪಲ್ಲೆ ಬಸವರಾಜ, ಜೋಳದರಾಶಿ ಚಂದ್ರಶೇಖರ, ಕೃಷ್ಣ, ಹೊನ್ನೂರಪ್ಪ, ಬೆಣಕಲ್ಲು ಮಲ್ಲಿ, ವಕೀಲರಾದ ಮಾರಣ್ಣ ಸೇರಿದಂತೆ ಹಲವಾರು ವಾಲ್ಮೀಕಿ ಸಮಾಜದ ಮುಖಂಡರು ಇದ್ದರು.