ಅನುದಿನ ಕವನ-೧೭೩೪, ಹಿರಿಯ ಕವಿ:ಮಹಿಮ, ಬಳ್ಳಾರಿ

ಪಡೆದುಕೊಂಡು ಬಂದದ್ದೇ ಇಷ್ಟು
ಇನ್ನೇಕೆ ನಿರೀಕ್ಷೆಗಳು?

ಬಂಧ ಸಂಬಂಧಗಳು
ಎಲ್ಲವೂ ಹುಸಿ
ಎಲ್ಲವೂ ಪೊಳ್ಳು

ಬಂದದ್ದು ಒಂಟಿ
ಹೋಗುವುದೂ ಒಂಟಿ
ಒಂಟಿಯಾಗಿ ಬದುಕಲೇನು ಕಷ್ಟ?

ಬದುಕನ್ನು ನಂಬು
ನಿನ್ನನ್ನು ನೀನು ಪ್ರೀತಿಸು
ಮಿಕ್ಕದ್ದೆಲ್ಲವೂ
ಮಿಕ್ಕವರೆಲ್ಲರೂ ಆಟಕ್ಕೆ

ಸತ್ಯವನ್ನು ನಂಬು

ಜಗತ್ತು ಬದಲಾಗಿಲ್ಲ
ಜನರು ಬದಲಾಗಿದ್ದಾರೆ
ಮೌನ ಮಾತಾಗಲಿ
ನೆಮ್ಮದಿ ಉಸಿರಾಗಲಿ


-ಮಹಿಮ, ಬಳ್ಳಾರಿ
—–

Leave a Reply

Your email address will not be published. Required fields are marked *