Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೯೦೮, ಕವಿ: ಸ್ನೇಹಪ್ರಿಯ ನಾಗರಾಜ್, ಬೆಂಗಳೂರು - Karnataka Kahale

ಅನುದಿನ ಕವನ-೧೯೦೮, ಕವಿ: ಸ್ನೇಹಪ್ರಿಯ ನಾಗರಾಜ್, ಬೆಂಗಳೂರು

ಮಾ.21 ವಿಶ್ವ ಕಾವ್ಯದ ದಿನ: ಕಾವ್ಯದ ದಿನಾಚರಣೆ ಹಿನ್ನಲೆಯಲ್ಲಿ ಕವಿ ಸ್ನೇಹಪ್ರಿಯ ನಾಗರಾಜ್ ಅವರು ರಚಿಸಿರುವ ಒಂದಷ್ಟು ಚುಟುಕುಗಳು…..ಹನಿ ಪ್ರಿಯರಿಗಾಗಿ!🍀🍀👇

೧ ಅವಳ ತುಂಟ ನಗು
ಎಲ್ಲರಿಗೂ ಸಿಗುತ್ತದೆ
ಎಂದಾಗ..
ಮೈ ತುಂಬ ಬೆಂಕಿ
ಮನಸ್ಸು ತಟಸ್ಥ

೨ ಪ್ರೇಮ ಮೊಗೆದಷ್ಟು
ಆಳ ಅನಾಹುತ
ಚಂಚಲ ಮನಸ್ಸು
ನುಡಿಸುವುದಿಲ್ಲ
ಸಂಗೀತ..

೩ ಅವಳು
ಆಳಕ್ಕಿಳಿಯುವ
ಮೊದಲು
ಕಿತ್ತೊಗೆಯಬೇಕು
ನಲಿವ
ಮನಸ್ಥಿತಿಗೆ
ಮರಳಬೇಕು..

೪ ಅವಳ ಜೊತೆ
ಹುಷಾರಾಗಿರು
ಮೋಹಪಾಶದಿಂದ
ನರಕ
ತೋರಿಸಿ ಬಿಟ್ಟಾಳು..


-ಸ್ನೇಹಪ್ರಿಯ ನಾಗರಾಜ್, ಬೆಂಗಳೂರು