
ಬಳ್ಳಾರಿ, ನ.12:ನಗರದ ರೂಪನಗುಡಿ ರಸ್ತೆಯ ಬಿ ಗೋನಾಳ್ ನಲ್ಲಿ ಮಂಗಳವಾರ ಸಂಜೆ ಜಿಲ್ಲಾ ಛಲವಾದಿ ಮಹಾಸಭಾದ(ಸಿಎಂಎಸ್) 17ನೇ ವಾರ್ಡ್ ಘಟಕದ ಆಶ್ರಯದಲ್ಲಿ ಭಾರತದ ವೀರ ವನಿತೆ ಒನಕೆ ಓಬವ್ವರವರ ಜಯಂತೋತ್ಸವವನ್ನು ಸಂಭ್ರಮ, ಸಡಗರಗಳಿಂದ ಆಚರಿಸಲಾಯಿತು. ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸಿ ಶಿವಕುಮಾರ್, ಛಲವಾದಿ ಸಮಾಜದ ಮುಖಂಡರಾದ ನಂದಿಹಳ್ಳಿ ಶಂಕರ್, ಕಟ್ಟೆಮನೆ ಹನುಮೇಶ, ಛಲವಾದಿ ಮಹಾಸಭಾ ಜಂಟಿ ಕಾರ್ಯದರ್ಶಿ ಡಿ ವೆಂಕಟೇಶ್, ಯುವ ಮುಖಂಡ ರಾಮಕೃಷ್ಣ , ಛಲವಾದಿ ಮಹಾಸಭಾ ಜಿಲ್ಲಾ ಉಪಾಧ್ಯಕ್ಷರು ಮಾನಯ್ಯ ಹಾಗೂ 17 ನ ವಾರ್ಡ್ ಅಧ್ಯಕ್ಷರು, ಮಾಜಿ 17ನೇ ವಾರ್ಡ್ ಅಧ್ಯಕ್ಷರು ಮಲ್ಲಿಕಾರ್ಜುನ, ಮರಿಬಸಪ್ಪ, ರಾಮಾಂಜಿನಿ, ಸಣ್ಣ ಈರಣ್ಣ ಪರಮೇಶಿ ಮೋಕ ಶ್ರೀನಿವಾಸಲು ಮೋಕ ಲಕ್ಷ್ಮಿ,ಸಿಎಂ ಶೇಖಣ್ಣ ರಾಜೇಶ ಸಿ ಮೌನೇಶ್ ನಾಗರಾಜು ಸಣ್ಣ ಶೇಖಣ್ಣ ಸಣ್ಣ ತಾಯಣ್ಣ, ಮೌನೇಶ,ಉಪೇಂದ್ರ, ಮೌನೇಶ, ಮುದ್ದ ಮಕ್ಕಳು ಮಹಿಳೆಯರು, ವಾರ್ಡಿನ ಎಲ್ಲಾ ಮುಖಂಡರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಆಕರ್ಷಕ ಮೆರವಣಿಗೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಕ್ಕಳು ಮಾತೆ ಒನಕೆ ಓಬವ್ವಳ ವೇಷ ಧರಿಸಿ ಗಮನ ಸೆಳೆದರು.
