ರಾಜ್ಯ ಗೃಹ‌ಸಚಿವ ಡಾ.‌ಜಿ. ಪರಮೇಶ್ವರ ಅವರಿಂದ ಬಾನುಲಿ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ

ತುಮಕೂರು, ಜ.11: ನಗರದಿಂದ ಪ್ರಕಟವಾಗುತ್ತಿರುವ  ಬಾನುಲಿ ಮಾಸಪತ್ರಿಕೆಯ ವಾರ್ಷಿಕ ವಿಶೇಷ ಸಂಚಿಕೆಯನ್ನು ರಾಜ್ಯ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಭಾನುವಾರ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದರು

ಬಾನುಲಿ‌ ಕನ್ನಡ ಮಾಸಿಕ 32 ಪುಟಗಳನ್ನು ಒಳಗೊಂಡು ಪ್ರತಿ ತಿಂಗಳು  ಹೊರ ಬರುತ್ತಿದ್ದು,  ನೂತನ ವರ್ಷಾರಂಭ ಪ್ರಚಲಿತ ವಿದ್ಯಮಾನಗಳ ಲೇಖನಗಳೊಂದಿಗೆ 48 ಪುಟಗಳೊಂದಿಗೆ ವಿಶಿಷ್ಟವಾಗಿ ಪ್ರಕಟವಾಗಿದೆ‌ ಎಂದು ಸಂಪಾದಕ ಸಿ. ಭಾನುಪ್ರಕಾಶ್ ತಿಳಿಸಿದ್ದಾರೆ.