ಹಿರಿಯ ಸಾಹಿತಿ ಬಿ ಎಲ್ ವೇಣುರವರ “ದುರ್ಗದ ಬೇಡರ್ದಂಗೆ” ಕಾದಂಬರಿ ಬಳ್ಳಾರಿ ವಿಎಸ್ಕೆ ವಿವಿ ಎಂಎ ತರಗತಿಗೆ ಪಠ್ಯವಾಗಿ ಆಯ್ಕೆ: ಅಭಿನಂದನೆ

ಬಳ್ಳಾರಿ, ಜ.15: ಹಿರಿಯ ಸಾಹಿತಿ ಬಿ ಎಲ್ ವೇಣು ಅವರ “ದುರ್ಗದ ಬೇಡರ್ದಂಗೆ” ಕಾದಂಬರಿ
ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿವಿಯ ಎಂ.ಎ.ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಆಯ್ಕೆ ಮಾಡಲಾಗಿದೆ.
1849ರಲ್ಲಿ ದುರ್ಗದಲ್ಲಿ ಬೇಡ ಹುಡುಗರು ದಂಡು ಕಟ್ಟಿ ನಡೆಸಿದ ದಂಗೆಯ ಕುರಿತು ಸಂಶೋಧಕರಾದ ಬಿ.ನಂಜುಂಡಸ್ವಾಮಿ ಅವರು ನೀಡಿದ ಉಪನ್ಯಾಸವೊಂದರಿಂದ ಪ್ರೇರಿತರಾಗಿ, ಇತಿಹಾಸದ ಈ ಘಟನೆಯನ್ನು ಆಧರಿಸಿ ಕಲ್ಪನೆಯ ಪಾಕ ಬೆರೆಸಿ ‘ದುರ್ಗದ ಬೇಡರ್ದಂಗೆ’ ಶೀರ್ಷಿಕೆಯಡಿ ಬಿ. ಎಲ್ ವೇಣು ಅವರು ಕಾದಂಬರಿ ರೂಪದಲ್ಲಿ ರಚಿಸಿದ್ದಾರೆ.
ಉಪನ್ಯಾಸ ಕೇಳುತ್ತಿರುವಾಗಲೇ ಅಲ್ಲಿನ ಅಧಿಕಾರಿ ವರ್ಗ, ಘಟನೆಗಳು ಕ್ರಮವಾಗಿ ಪಾತ್ರಗಳಾಗಿ ಸನ್ನಿವೇಶ
ಗಳಾಗಿ ಅಚ್ಚೊತ್ತಿದ್ದವು ಎಂದು ಮುನ್ನುಡಿಯಲ್ಲಿ ವೇಣು ಉಲ್ಲೇಖಿಸುತ್ತಾರೆ. ಬೆಳೆದ ಭೂಮಿಗೆ ಸುಂಕದ ಜೊತೆಗೆ,
ಪಾಳುಭೂಮಿಗೂ ಸುಂಕ ಕೇಳಿದ ಬ್ರಿಟಿಷರ ವಿರುದ್ಧ ರೈತರು, ಪಾಳೆಪಟ್ಟಿನವರು, ಜಮೀನ್ದಾರರು ಸಿಡಿದೆದ್ದ ಘಟನೆಯೊಂದಿಗೆ ‘ದುರ್ಗದ ಬೇಡರ್ದಂಗೆ’ ಆರಂಭವಾಗುತ್ತದೆ. ನಾಯಕನಹಟ್ಟಿ ಪಾಳೇಗಾರ ಕೆಂಚಮಲ್ಲಪ್ಪ ನಾಯಕನ ಮೊಮ್ಮಗ ವಾಲ್ಮೀಕಿ ನಾಯಕನ ಆರ್ಭಟದೊಂದಿಗೆ ಪುಟಗಳು ತಿರುವುತ್ತಲೇ ಚಾರಿತ್ರಿಕವಾದ ಘಟನೆಗಳು ಕಲ್ಪನೆಯ ಸನ್ನಿವೇಶದೊಂದಿಗೆ ಸಾಗುತ್ತವೆ. ಇತಿಹಾಸದಲ್ಲಿನ ಘಟನೆಗಳ ಸುತ್ತ ಕಲ್ಪನೆಯ ಕಥೆ ಕಟ್ಟುವುದು ಕಠಿಣ. ಆದರೆ ದಂಗೆಯ ಎಳೆಯನ್ನಿಟ್ಟುಕೊಂಡು ಬೇಡ ಯುವಕರ ಸಾಹಸಗಾಥೆಯನ್ನು ವಿವರಿಸುತ್ತಾ ವೇಣು ಅವರು ಕಾದಂಬರಿಗೆ ಅಗತ್ಯವಾದ ರೋಚಕತೆಯನ್ನು ಸೃಷ್ಟಿಸಿದ್ದಾರೆ.

ಈ ಕಾದಂಬರಿಯನ್ನು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿವಿಯ ಎಂಎ ತರಗತಿಗೆ ಪಠ್ಯವಾಗಿರುವುದನ್ನು ಹರ್ಷಿಸಿರುವ ಕವಿ, ಗಾಯಕ ಗಾನಾ ಸುಮಾ ಪಟ್ಡನಹಳ್ಳಿ
ಹಾಗೂ‌ ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಬಳ್ಳಾರಿಯ ಸಿ. ಮಂಜುನಾಥ ಅಭಿನಂದಿಸಿದ್ದಾರೆ.