
ಹುಬ್ಬಳ್ಳಿ/ಬಳ್ಳಾರಿ, ಜೂ.22: ಹುಬ್ಬಳ್ಳಿಯಲ್ಲಿ ಭಾನುವಾರ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಸಿ ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಘಟಕ ಆಯೋಜಿಸಿದ್ದ ರಾಜ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಳ್ಳಾರಿಯ ಚಿಗುರು ಕಲಾ ತಂಡ ತನ್ನ ಹಾಡುಗಾರಿಕೆ ಮೂಲಕ ಮಿಂಚಿತು.
ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಕುರಿತು ತಂಡ ಹಾಡಿದ ಕ್ರಾಂತಿ ಗೀತೆಗಳು ಮತ್ತು ಜಾಗೃತಿ ಗೀತೆಗಳು ಸಭಿಕರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಗಾಯಕರುಗಳಾದ ಹುಲುಗಪ್ಪ ಎಸ್ ಎಂ. ಅನುಮಯ್ಯ ಅವರ ಗಾಯನ ಮತ್ತು ವಾದ್ಯ ಕಲಾವಿದರಾದ ಹೇಮಂತ್(ಜಂಬೆ), ವಿಜಯ್(ಪ್ಯಾಡ್) , ಗೋವಿಂದ(ತಮಟೆ), ಮಂಜುನಾಥ ಧಾರವಾಡ (ಕ್ಯಾಷಿಯೋ) ಅವರ ಸಂಗೀತ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಎಸ್.ಬಿ.ಐ ನೌಕರರು, ಗಣ್ಯರ ಮೆಚ್ಚುಗೆಗೆ ಪಾತ್ರವಾಯಿತು.
