ಡಿಜಿ ಪ್ರತಿಷ್ಠಿತ ಪ್ರಶಂಸನಾ ಪದಕಕ್ಕೆ ಎಂ. ಶ್ರೀನಿವಾಸರಾವ್, ಹನುಮಂತಪ್ಪ, ಸಿ. ವೆಂಕಟರಮಣ ಭಾಜನ: ಅಭಿನಂದನೆ

ಬಳ್ಳಾರಿ, ಜೂ. 23: ಡಿಜಿ ಮತ್ತು ಐಜಿಪಿ ರವರ 2025-26 ನೇ ಸಾಲಿನ ಪ್ರತಿಷ್ಠಿತ ಪ್ರಶಂಸನಾ ಪದಕಕ್ಕೆ ಜಿಲ್ಲೆಯ ಡಿಸಿಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಎಂ. ಶ್ರೀನಿವಾಸ್ ರಾವ್, ಎಸ್.ಪಿ ಕಚೇರಿಯ ಡಿಸಿಆರ್ ಬಿ ಘಟಕದ ಎಸ್.ಎಸ್.ಐ ಗಳಾದ ಹನುಮಂತಪ್ಪ ಮತ್ತು ಸಿ ವೆಂಕಟರಮಣ ಅವರು ಭಾಜನರಾಗಿದ್ದಾರೆ.

ಅಭಿನಂದನೆ: ಡಿಜಿ ಮತ್ತು ಐಜಿಪಿರವರ  ಪ್ರತಿಷ್ಠಿತ ಪ್ರಶಂಸನಾ ಪದಕಕ್ಕೆ ಭಾಜನರಾಗಿರುವ ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ಜಿಲ್ಲಾ ಪೊಲೀಸ್ ಇಲಾಖೆಯ ಹಿರಿಯ ಕಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

ಡಾ. ಭರಣಿ ವೇದಿಕೆಯಿಂದ ಅಭಿನಂದನೆ: ಡಿಜಿ ಮತ್ತು ಐಜಿಪಿ ರವರ 2025-26 ನೇ ಸಾಲಿನ ಪ್ರತಿಷ್ಠಿತ ಪ್ರಶಂಸನಾ ಪದಕಕ್ಕೆ ಭಾಜನರಾಗಿರ ಜಿಲ್ಲೆಯ ಪೊಲೀಸ್ ಅಧಿಕಾರಿಗಳಾದ ಡಿಸಿಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಎಂ. ಶ್ರೀನಿವಾಸ್ ರಾವ್, ಎಸ್.ಪಿ ಕಚೇರಿಯ ಡಿಸಿಆರ್ ಬಿ ಘಟಕದ ಎಸ್.ಎಸ್.ಐ ಗಳಾದ ಹನುಮಂತಪ್ಪ ಮತ್ತು ಸಿ ವೆಂಕಟರಮಣ ಅವರನ್ನು ಡಾ.‌ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಅಭಿನಂದಿಸಿದೆ.

ವೇದಿಕೆಯ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ ಅವರು ಮೂವರು ಅಧಿಕಾರಿಗಳು ನಮ್ಮ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿ ಮುಂಬರುವ ದಿನಗಳಲ್ಲಿ ದಕ್ಷ ಸೇವೆಯ ಮೂಲಕ ಮುಖ್ಯಮಂತ್ರಿಗಳ ಪದಕವನ್ನು ಪಡೆಯಲಿ ಎಂದು ಹಾರೈಸಿ ಅಭಿನಂದಿಸಿದ್ದಾರೆ.

 

Leave a Reply

Your email address will not be published. Required fields are marked *