‘…I was so lonely without you…’ who said it?
ಕಿಟಕಿ ಪರದೆಗಳಾಚೆ
ಕವಿದ ಮೌನ-
ಮುರಿದು ಮಾತಾಡಿದ್ದು ಖಾಲಿ ಕಣ್ಣು,
ಅಳಿಸಿ ಹಾಕಿದ
ಮುಗುಳ್ನಗೆ, ನೀಳ ತೋಳು
ಬೆತ್ತಲೆ ಪಾದ;
ಹಗಲೆನ್ನದೆ ಇರುಳೆನ್ನದೆ ಸುರಿವ ಮಳೆ,
ಮಳೆ ನೀರು-
ನೀರು
ಸುರಿವ ಧ್ವನಿ. I missed-
You…
ಬಿಟ್ಟು ಇದ್ದದ್ದು ಒಂದೇ ರಾತ್ರಿ,
ಎಷ್ಟೊಂದು ಮಳೆ…
ಅಪರಾಧೀ ಧ್ವನಿಯಲ್ಲಿ
ಪರದೆಗಳು
ಉಸುರಿದವು; ತುಸು ನಾಚಿಕೆಯಿಂದ,
ಒಂದಲ್ಲ, ಎರಡು ರಾತ್ರಿ…

-ಎಂ ಎಸ್ ರುದ್ರಶ್ವರ ಸ್ವಾಮಿ, ಬೆಂಗಳೂರು
