ಅನುದಿನ ಕವನ-೧೯೩೯ , ಹಿರಿಯ ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ:ಅವಳೂ ಕವಿತೆ ಬರೆಯುತ್ತಾಳೆ

ಅವಳೂ ಕವಿತೆ ಬರೆಯುತ್ತಾಳೆ

ಹೊತ್ತಿಗೆಯ ಮಧ್ಯೆ
ನವಿಲುಗರಿಯಾಗಿ
ಕಾರಿರುಳಲ್ಲಿ
ಚಿಕ್ಕೆಗಳಾಗಿ
ನೀರ ಮೇಲೆ
ಅಲೆಗಳಾಗಿ
ಗಾಳಿಯಲ್ಲಿ
ತಂಗಾಳಿಯಾಗಿ
ಗಿಡಗಳಲ್ಲಿ
ಹೂಗಳಾಗಿ
ಮೋಡಗಳಲ್ಲಿ
ಹನಿಗಳಾಗಿ
ಆಗಸದಲ್ಲಿ
ಮಳೆಬಿಲ್ಲಾಗಿ
ಎದೆಯಲ್ಲಿ
ಮಿಡಿತವಾಗಿ
ಅದೂ ಕೇವಲ ನನಗಾಗಿ
ಅವಳೂ ಕವಿತೆ ಬರೆಯುತ್ತಾಳೆ

-ಸಿದ್ಧರಾಮ ಕೂಡ್ಲಿಗಿ

Leave a Reply

Your email address will not be published. Required fields are marked *