ಹನಿಗವನಗಳು ಮೂರು ವಿಚಾರ ನೂರು

೧.”ಶೂರ ಸಂಗೊಳ್ಳಿ ರಾಯಣ್ಣ”
ತಮ್ಮ ಅವನತಿಗೆ ನಾಂದಿ ಹಾಡುತ್ತಿರುವನೆಂದು
ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಏರಿಸಿದರು
ಗಲ್ಲಿಗೆ!
ದೇಶಕ್ಕಾಗಿ ಸಂಗೊಳ್ಳಿ ರಾಯಣ್ಣ ಗುರಿ
ಇಟ್ಟು ಹೊಡೆದಿದ್ದ ದೇಶದ್ರೋಹಿಗಳ
ಎದೆಗೆ!
೨. “ಅಂಟುರೋಗ”
ಸಂವಿಧಾನ ರಚನೆಕಾರರು ನಂಬಿದ್ದರು
ಹತ್ತು ವರ್ಷಗಳಲ್ಲಿ ನಿವಾರಣೆಯಾದೀತು
ಸಾಮಾಜಿಕ ಅಸಮಾನತೆ!
ಮನುವಾದಿಗಳಿಗೆ ಅಂಟಿಕೊಂಡ ರೋಗದು
ಹಾಗೇ ಉಳಿದಿದೆ ಮೇಲು ಕೀಳಿನ
ಕಾಯಿಲೆ ಅಸಮಾನತೆ!
೩.”ಶಾಶ್ವತ”
ನಿಜವಾದ ಪ್ರೇಮಿಗಳಲ್ಲಿ
ಜಗಳ ಕೋಪವೆಲ್ಲವೂ
ಇರುವದು ಕ್ಷಣಕಾಲ
ಅಂತಹ ಪ್ರೇಮಿಗಳ
ಬಾಂಧವ್ಯ ಮಧುರ
ಮಧುರವೂ ಚಿರಕಾಲ!
-ಗಗೋಚ (ಗಣಪತಿ ಗೋ ಚಲವಾದಿ), ಬೆಂಗಳೂರು
