ಅನುದಿನ ಕವನ-೨೦೦೧, ಹಿರಿಯ ಕವಿ: ಎಂ. ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು

Living and Loving ಎಂಬ ಮಾಯೆ…

ಅವಳ ಅವನ ನಡುವೆ
ಇದೆ ಒಂದು
ನಾಜೂಕು ಸೇತುವೆ ತಲೆಮಾರಿನದು, ಅತ್ತ
ಅವನು, ಇತ್ತ ಇವಳು

ಎರಡು ಜಗತ್ತು, ಒಂದು
ಗಂಡಿನದು
ಹೆಣ್ಣಿನ ಲೋಕ ಇನ್ನೊಂದು. ಆಳದಲಿ
ಹರಿಯುತಿದೆ ಆಕರ್ಷಣೆ-

ಯ ಸೆಲೆ. ಮೂಲ
ಒಂದೇ; ಕತ್ತರಿಸಿ-
ದರೂ ಉಳಿದು ಬಿಡುವ ಹೊಕ್ಕುಳದ ಕುರುಹು.
ಇರುವಿಕೆ ಯಾರೊಬ್ಬರದೂ ಅಲ್ಲ.

ಇಬ್ಬರ ನಡುವಿನ
ಸೇತುವೆ ಮುರಿದು-
ಬಿದ್ದ ದಿನ ಅವಳು ಇವಳೊಂದಿಗೆ, ಅವನು
ಇವನೊಂದಿಗೆ ಜೊತೆಗಿರಬಹುದು

ದೂರ ನಿಂತು ನೋಡು-
ವುದಕ್ಕೆ ಚಂದ
ಮರಳುಗಾಡಿನ ಮೃಗಜಲ. ದಾಟಬೇಕು
ಸೇತುವೆಯನ್ನು ಆಕಡೆಯಿಂದ

ಈಕಡೆಗೆ, ಈಕಡೆ-
ಯಿಂದ ಆಕಡೆಗೆ
ಆಕಾಶ ಭೂಮಿ ನಡುವೆ ನಕ್ಷತ್ರಗಳ ಬೆಳಕು
ಹರಿವ ಹಾಗೆ. ಅಜ್ಜ-ಮುತ್ತಜ್ಜ

ನನ್ನು ತಿಂದ ಮರ
ಮೊಮ್ಮಗನಿಗೆ
ಹಣ್ಣು ನೀಡುವ ಹಾಗೆ ಬದುಕುತ್ತ                              ಪ್ರೀತಿಸುತ್ತ ಬದುಕುತ್ತ…..

-ಎಂ ಎಸ್ ರುದ್ರೇಶ್ವರಸ್ವಾಮಿ,  ಬೆಂಗಳೂರು

Leave a Reply

Your email address will not be published. Required fields are marked *