ಅನುದಿನ ಕವನ-೨೦೦೭, ಹಿರಿಯ ಕವಿ:ಎಂ.ಎಸ್.‌ ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಕತ್ತಲು…

ಕತ್ತಲು…

ಸಂಜೆ, ವಿಪರೀತ ಮಳೆ
ರಾತ್ರಿ; ಮೋಡ ಕವಿದ ಆಕಾಶ,
ನಕ್ಷತ್ರ ಮಿನುಗುತ್ತಿಲ್ಲ
ಕಪ್ಪು, ಕತ್ತಲು.

ಬರೆಯುವುದಕ್ಕೆ ಕುಳಿತರೆ
ಪದಗಳು ಜಾರಿ ಹೋಗುತ್ತಿವೆ
ಕಪ್ಪು ಕತ್ತಲೊಳಗೆ,
ಏನೋ ಆಗಿದೆ ಕತ್ತಲೆಗೆ.

ಒಂಟಿಯಾಗಿ ಇರುವುದಕ್ಕೆ ಭಯ
ಈ ಪದಗಳಿಗೆ; ಹಿತವಾದ
ಬೆಚ್ಚನೆಯ ಸಹವಾಸ ಬೇಕು,
ತಿರುಗಿಸಿವೆ ಮುಖ ಬೆಳಕಿನೆಡೆಗೆ.

ಕಣ್ಮುಚ್ಚಿದರೆ; ಹರಿಯುತ್ತಿದೆ
ಕೆಂಪು ಬೆಳಕು ಕಣ್ಗುಡ್ಡೆಗಳ ಮೇಲೆ…


-ಎಂ.ಎಸ್.‌ ರುದ್ರೇಶ್ವರಸ್ವಾಮಿ, ಬೆಂಗಳೂರು

Leave a Reply

Your email address will not be published. Required fields are marked *