ಎದೆಗೆ ಬಿದ್ದ ಬುದ್ಧ…

ನೀ ಸಾಗಿದ ದಾರಿಯುದ್ದಕ್ಕೂ ಈಗ
ಹೂಗಳ ಘಮಲು ಹೆಚ್ಚಾಗಿದೆ
ತಂಪೇರೆದ ಮಳೆ ಭೂಮಿಗೆ ಈಗ
ಸುವಾಸನೆ ಹಾಸಿ ಊರಿಗೆಲ್ಲ ಕಂಪ ಬೀರಿದೆ…
ಜನರು ಈಗ
ನಿನ್ನ ಧ್ಯಾನಿಸಲು ಇಚ್ಛಿಸಿದ್ದಾರೆ
ಬಹು ಸರಾಗವಾಗಿ ನೀನು ಈಗ
ಜನರ ಎದೆಗೆ ಬಿದ್ದ ಬುದ್ಧ
ಸಮ್ಮೇಳನವೋ ಸಮ್ಮಿಲನವೋ
ಅಂತು ನೀನು ಊರೂರಿಗೆ ನಡೆದು
ಜನರು ಹೃದಯಕ್ಕೆ ಸನಿಹವಾಗುತ್ತಿರುವೆ….
ಕಾಲ ಹೀಗೆಯೇ ಇರುವುದಿಲ್ಲ
ಹಳೆ ನೀರು ಕೊಚ್ಚಿ ಹೋಗಿ
ಹೊಸ ನೀರು ಹರಿವಂತೆ
ನೀನು ಈ ನೆಲದಿ ಹರಿವ ಜೀವಜಲ
ಹಳತು ಮರೆಸಿ ಹೊಸತು
ಜನರೆದೆಯಾಂತರಾಳಕ್ಕೆ ಕತ್ತಲ ಸರಿಸಿ
ಬೆಳಗ ಮುಂಜಾವಾಗುವ ಹೊಸ ಸೂರ್ಯ….

-ಸಿದ್ದು ಜನ್ನೂರ್, ಚಾಮರಾಜನಗರ
