
ಬಳ್ಳಾರಿ, ನ.25: ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ, ಗದಗ ಮತ್ತು ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಗುರುವಾರ ಸಂಜೆ 5ಗಂಟೆಗೆ ನಗರದ ಬೂಡಾ ಕಚೇರಿ ಆವರಣದಲ್ಲಿರುವ ಕೆ.ಇ.ಬಿ. ಸಭಾಂಗಣದಲ್ಲಿ ‘ಸಂವಿಧಾನ ದಿನಾಚರಣೆ’ ಹಾಗೂ ಲಿಡ್ಕರ್ ಅಧ್ಯಕ್ಷ, ಹಿರಿಯ ಮುಖಂಡ ಮುಂಡ್ರಿಗಿ ನಾಗರಾಜ್ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ದಸಾಪ ಜಿಲ್ಲಾಧ್ಯಕ್ಷ ಡಾ. ನಾಗಪ್ಪ ಬಿ.ಇ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾರ್ಯಕ್ರಮವನ್ನು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮುನಿರಾಜು .ಎಂ ಅವರು ಉದ್ಘಾಟಿಸುವರು.
ಅಧ್ಯಕ್ಷತೆಯನ್ನು ನಗರ ಶಾಸಕ ನಾರಾ ಭರತರೆಡ್ಡಿ ಅವರು ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ, ಜಿಲ್ಲಾ ಪಂಚಾಯತ್ ಸಿಇಓ ಮೊಹಮ್ಮದ್ ಹ್ಯಾರಿಸ್ ಸುಮೇರ್, ಜಿಲ್ಲಾ ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ದಸಾಪ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ, ಕೆಡಿಪಿ ಸದಸ್ಯ ವೆಂಕಟೇಶ ಪ್ರಸಾದ, ರಾಜ್ಯ ಹಿರಿಯ ಮುಖಂಡ ಎ. ಮಾನಯ್ಯ ಅವರು ಭಾಗವಹಿಸುವರು.

ವಿಶೇಷ ಉಪನ್ಯಾಸ: ಸಿರುಗುಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರೂ ಆಗಿರುವ ದಸಾಪ ತಾಲೂಕು ಘಟಕದ ಅಧ್ಯಕ್ಷ ಡಾ. ಚಂದ್ರಕಾಂತ .ಕೆ.ಎಂ ಅವರು ವಿಶೇಷ ಉಪನ್ಯಾಸ ನೀಡುವರು ಎಂದು ಹೇಳಿದ್ದಾರೆ.
ವಿಶೇಷ ಅಹ್ವಾನಿತರಾಗಿ ಕರ್ನಾಟಕ ರಾಜ್ಯ ಆದಿ ಜಾಂಬವ ನಿಗಮದ ನಿರ್ದೇಶಕ ಸಿದ್ದೇಶ್, ಕರ್ನಾಟಕ ನಗರ ಮೂಲಸೌಕರ್ಯ ಮತ್ತು ಹಣಕಾಸು ನಿಗಮದ ನಿರ್ದೇಶಕ ಹುಸೇನಪ್ಪ, ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ನಿರ್ದೇಶಕ ವೆಂಕಟೇಶ ಹೆಗಡೆ, ಹಿರಿಯ ಸಾಹಿತಿ ಎನ್.ಡಿ. ಯಂಕಮ್ಮ, ದಲಿತ ಮುಖಂಡ ಸಿ. ನರಸಪ್ಪ, ಕಲ್ಯಾಣ ಕರ್ನಾಟಕ ಇತಿಹಾಸ ರಚನಾ ಸಮಿತಿಯ ತಜ್ಞರು ಹಾಗೂ ವಿಎಸ್ ಕೆ ವಿವಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ ಪ್ರಸಾದ್ .ಎನ್.ಎಲ್, ಶ್ರೀಮತಿ ಸರಳಾದೇವಿ ಸತೀಶ್ ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಸ್ವಾಯತ್ತ) ಗ್ರೇಡ್-೧ ಪ್ರಾಚಾರ್ಯ ಪ್ರೊ. ರಾಮಕೃಷ್ಣ ಎಚ್, ತೆಕ್ಕಲಕೋಟೆ ಶ್ರೀಮತಿ ಹೊನ್ನೂರಮ್ಮ ದಿ|| ಎಂ.ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಮೋಕ, ಗಂಗಾವತಿ ಶ್ರೀರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ಕರಿಗೋಳಿ, ಬಳ್ಳಾರಿ ಮಹಾನಗರ ಪಾಲಿಕೆಯ ಪ್ರತಿ ಪಕ್ಷದ ನಾಯಕ ಇಬ್ರಾಹಿಂ ಬಾಬು, ಮಹಾನಗರ ಪಾಲಿಕೆ ಮಾಜಿ ಮೇಯರ್, ಹಾಲಿ ಸದಸ್ಯೆ ಶ್ರೀಮತಿ ತ್ರಿವೇಣಿ, ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಗೋವರ್ಧನ, ದಲಿತ ಮುಖಂಡರಾದ ಬಾಪೂಜಿ ನಗರ ಈರಣ್ಣ, ಸಣ್ಣ ನಾಗರಾಜ, ದಸಾಪ ಜಿಲ್ಲಾ ಗೌರವಾಧ್ಯಕ್ಷ ಡಾ. ಟಿ. ದುರುಗಪ್ಪ, ದಸಾಪ ನಿಕಟಪೂರ್ವ ಅಧ್ಯಕ್ಷ ಸಿ. ಮಂಜುನಾಥ, ಮುಖಂಡರಾದ ಸಂಗನಕಲ್ ವಿಜಯ್ ಕುಮಾರ್, ದಸಾಪ ಪದಾಧಿಕಾರಿ ಡಾ. ಹನುಮೇಶ್ ಜೋಳದರಾಶಿ ಮತ್ತಿತರ ಗಣ್ಯರು ಉಪಸ್ಥಿತರಿರುವರು ಎಂದು ಡಾ.ನಾಗಪ್ಪ ತಿಳಿಸಿದ್ದಾರೆ.

ದಸಾಪ ಕರುಗೋಡು ತಾಲೂಕು ಅಧ್ಯಕ್ಷ ಡಾ. ರಾಮಯ್ಯ, ಕಂಪ್ಲಿ ತಾಲೂಕು ಅಧ್ಯಕ್ಷ ರಾಮಪ್ಪ, ಸಂಡೂರು ತಾಲೂಕು ಅಧ್ಯಕ್ಷೆ ಡಾ.ಹುಲಿಗೆಮ್ಮ ಹಾಗೂ ಮುಂಡ್ರಿಗಿ ನಾಗರಾಜ್ ರವರ ಅಭಿಮಾನಿಗಳ ಬಳಗ ಸರ್ವರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ: ನಗರದ ಚಿಗುರು ಕಲಾ ತಂಡ ಜಾಗೃತಿ ಹಾಗೂ ಕ್ರಾಂತಿ ಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸುವರು.
*****
