ಅನುದಿನ ಕವನ-೨೦೨೮, ಕವಯತ್ರಿ: ಸತ್ಯಾ ಗಿರೀಶ್(ಅಮ್ಮಸಂದ್ರ), ಬೆಂಗಳೂರು

ನಮ್ಮಿಬ್ಬರ ನಡುವೆ
ಮಾತಿನ ಮಧ್ಯಸ್ತಿಕೆ ಬೇಕಿರಲಿಲ್ಲ ನಿಜ,
ಆದರೆ ಮೌನಕ್ಕೂ ಚೂರು
ವಿಶ್ರಾಂತಿ ಕೊಡಬೇಕಿತ್ತು,

ಇಹಪರವೆಲ್ಲವೂ ಬೋರೆನಿಸಿ
ಬದುಕು ಪಿಚ್ಚೆನಿಸಿದಾಗೆಲ್ಲಾ
ನಿನ್ನೆರೆಡು ಮಾತುಗಳು ನೀಡುವ
ನೆಮ್ಮದಿಯ ಮುಂದೆ
ಜಗತ್ತಿನ ಸಂಗೀತವೆಲ್ಲವೂ
ಮಂಡಿಯೂರಲೇಬೇಕು.

ನೀನು ಇದ್ದೂ ಇಲ್ಲದವನಂತೆ
ನಟಿಸುವುದರಲ್ಲಿ ನಿಸ್ಸೀಮ ಬಿಡು,
ನಾನೋ ಭ್ರಮೆಯ ಬದುಕನ್ನೇ
ಅಪ್ಪಿ, ಅರಗಿಸಿಕೊಂಡಿದ್ದೇನೆ.

✍️ಸತ್ಯಾ ಗಿರೀಶ್(ಅಮ್ಮಸಂದ್ರ), ಬೆಂಗಳೂರು

Leave a Reply

Your email address will not be published. Required fields are marked *