ಅನುದಿನ ಕವನ-೨೦೨೯, ಕವಿ: ಚಿದಂಬರ ನರೇಂದ್ರ, ಬೆಂಗಳೂರು

“ನಿನಗೆ ಹಸಿವಾಗಿದೆಯಾ?”
ಯಾರೂ ಕೇಳಲಿಲ್ಲ ನನ್ನ.

ಸುಮ್ಮನೇ ಒಂದು ಪ್ಲೇಟ್ ಪ್ರತ್ಯಕ್ಷವಾಯಿತು
ನನ್ನ ಎದುರು,
ಮುಚ್ಚಲಾಗಿತ್ತು ಅದರ ಮೇಲೆ ಇನ್ನೊಂದನ್ನು
ಏನನ್ನೂ ಬಿಸಿಯಾಗಿಡುವಂತೆ.

ಅಲ್ಲಿ ಪ್ರೀತಿ ಪ್ರೇಮದ ಕುರಿತಾದ
ಯಾವ ಭಾಷಣಗಳಿರಲಿಲ್ಲ,
ಯಾರದೋ ಕಾಳಜಿಯ ಕುರಿತಾದ
ಯಾವ ಘೋಷಣೆಗಳೂ ಇರಲಿಲ್ಲ.

ಯಾರೋ ಒಬ್ಬರು ಸುಮ್ಮನೇ
ಕೊಂಚ ಹೆಚ್ಚು ಪ್ರಯತ್ನ ಮಾಡಿದ್ದರು,
ತಮ್ಮ ಇಡೀ ದಿನದ ದಣಿವಿನ
ನಂತರವೂ.


-ಚಿದಂಬರ ನರೇಂದ್ರ, ಬೆಂಗಳೂರು

Leave a Reply

Your email address will not be published. Required fields are marked *