ಬೆಂಗಳೂರು, ನ. 28: ಹಿರಿಯ ಲೇಖಕಿ ಸ.ಉಷಾ ಅವರು ಅನಾರೋಗ್ಯದಿಂದ ಶನಿವಾರ ರಾತ್ರಿ (ನ. 28) ಎಂಟೂವರೆ ಹೊತ್ತಿಗೆ ಬೆಂಗಳೂರಿನಲ್ಲಿ ನಿಧನರಾದರು.

ಅವರಿಗೆ 72 ವರ್ಷ ವಯಸ್ಸಾಗಿತ್ತು.
ಅವರ ಅಂತ್ಯಕ್ರಿಯೆ ಭಾನುವಾರ (ನ. 29) ಮಧ್ಯಾಹ್ನ ಬೆಂಗಳೂರಿನ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ.
ಅನಾರೋಗ್ಯ ಕಾರಣ ಹದಿನೈದು ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ತಮ್ಮ ಎಂ.ಎ ಸಹಪಾಠಿ ಮಂಜಪ್ಪ ಅವರನ್ನು ಮದುವೆಯಾಗಿದ್ದ ಉಷಾ ಅವರು ಅರಸಿಕೆರೆಯ ಹೊಯ್ಸಳೇಶ್ವರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ನಿವೃತ್ತಗೊಂಡ ನಂತರ ಅಲ್ಲಿಯೇ ನೆಲೆಸಿದ್ದರು. ಕೆಲ ವರ್ಷಗಳ ಹಿಂದೆ ಶಿವಮೊಗ್ಗ ಹತ್ತಿರ ನೆಲೆಗೊಂಡಿದ್ದರು.
ಪ್ರಮುಖ ಕೃತಿಗಳು: ತೊಗಲು ಗೊಂಬೆಯ ಆತ್ಮಕಥೆ, ಈ ನೆಲದ ಹಾಡು ಕವನ ಸಂಕಲನಗಳು.
ಹವಳ ಹಾರಿದ ಹೊತ್ತು, ಕಸೂತಿ ಕಾದಂಬರಿಗಳು
ವೈದೇಹಿ -ವಿಮರ್ಶಾ ಕೃತಿ.
ಅವರು ಬರೆದುದು ಕಡಿಮೆ. ಆದರೆ ಗಟ್ಟಿಯಾದವು ಎಂದು ಹಿರಿಯ ಲೇಖಕ ಗಣೇಶ ಅಮೀನಗಡ ಅವರು ಮಾಹಿತಿ ನೀಡಿದ್ದಾರೆ. ಹಿರಿಯ ಲೇಖಕಿ ಸ. ಉಷಾ ಅವರ ನಿಧನ ಸಾರಸ್ವತ ಲೋಕಕ್ಕೆ ನಷ್ಟವಾಯಿತು ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
