ಹಾಸನದಲ್ಲಿ ಅಂಬೇಡ್ಕರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮಾರಕ ನಿರ್ಮಾಣ: ಸಚಿವ ಶ್ರೀರಾಮುಲುರಿಗೆ ಅಭಿನಂದನೆ

ಹಾಸನ: ನಗರದಲ್ಲಿ ಅಂಬೇಡ್ಕರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮಾರಕ ನಿರ್ಮಿಸಲು ಬಜೆಟ್ ನಲ್ಲಿ ಒಂದು ಕೋಟಿ ಅನುದಾನ ಮೀಸಲಿಟ್ಟಿರುವುದಕ್ಕೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರನ್ನು ಹಾಸನ ಜಿಲ್ಲೆಯ ದಲಿತ ಸಂಘಟನೆ ಮುಖಂಡರು ಶನಿವಾರ ಅಭಿನಂದನೆ ಸಲ್ಲಿಸಿದರು.
ಹಿರಿಯ ಮುಖಂಡ, ಹೋರಟಗಾರ ಶ್ರೀಧರ್ ಕಲಿವೀರ್ ಅವರ ನೇತೃತ್ವದಲ್ಲಿ ಸಚಿವ ಶ್ರೀರಾಮುಲು ಅವರಿಗೆ ಜಿಲ್ಲೆಯ ವಿವಿಧ ದಲಿತ ಸಂಘಟನೆ ಮುಖಂಡರು ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ, ಯುವ ಮುಖಂಡ‌ ನಾಗರಾಜ್ ಹೆತ್ತೂರ್ ಮತ್ತಿತರರು ಇದ್ದರು.
*****

Leave a Reply

Your email address will not be published. Required fields are marked *