ವಿಜಯನಗರ ಡಿಸಿ, ಎಸ್ಪಿ ದಿಢೀರ್ ವರ್ಗಾವಣೆ: ಸಾರ್ವಜನಿಕರ ಅಚ್ಚರಿ

  • ಹೊಸಪೇಟೆ(ವಿಜಯನಗರ), ನ.4: ಜಿಲ್ಲೆಯ ದಕ್ಷ ಅಧಿಕಾರಿಗಳೆಂದು ಗುರುತಿಸಿಕೊಂಡಿದ್ದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರನ್ನು ಏಕಕಾಲದಲ್ಲಿ ವರ್ಗಾವಣೆ ಮಾಡಿ ಶುಕ್ರವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
    ಈ ದಿಢೀರ್ ಸರಕಾರದ ಆದೇಶ ಸಾರ್ವಜನಿಕರಲ್ಲಿ ಅಚ್ಚರಿಯನ್ನುಂಟು ಮಾಡಿದೆ ಮಾತ್ರವಲ್ಲ ಚರ್ಚೆಗೆ ಗ್ರಾಸವಾಗಿದೆ.
    ಡಿಸಿ, ಎಸ್ಪಿ ಅವರಿಗೆ ವರ್ಗಾವಣೆ ಆದೇಶ ಹೊರಡಿಸಿರುವ ಸರ್ಕಾರ ಇಬ್ಬರೂ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಿಲ್ಲದೇ ಇರುವುದು ಗಮನ ಸೆಳೆದಿದೆ.
    ವಿಜಯನಗರ ಜಿಲ್ಲೆಯಾಗಿ ಒಂದು ವರ್ಷದ ಅವಧಿಯಲ್ಲಿ ಇಬ್ಬರೂ ಉನ್ನತ ಅಧಿಕಾರಿಗಳು ಉತ್ತಮ ಸೇವೆಯನ್ನು ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
    ಅವಧಿಗೆ ಮುನ್ನವೇ ದಕ್ಷ. ಅಧಿಕಾರಿಗಳನ್ನು ವರ್ಗಾಯಿಸಿರುವುದನ್ನು ಹೊಸಪೇಟೆಯ ಸಂಘ ಸಂಸ್ಥೆಗಳ ಮುಖಂಡರು ವಿರೋಧಿಸಿದ್ದಾರೆ.
  • *****

Leave a Reply

Your email address will not be published. Required fields are marked *