ಅನುದಿನ‌ ಕವನ-೭೧೪, ಕವಿ: ಮೇಗರವಳ್ಳಿ ರಮೇಶ್,ಶಿವಮೊಗ್ಗ. ಕಾವ್ಯ ಶೀರ್ಷಿಕೆ:ಸಾಲದು ಕಾಲ ಪ್ರಿಯೆ!

ಸಾಲದು ಕಾಲ ಪ್ರಿಯೆ!

ಸಾಲದು ಕಾಲ ಪ್ರಿಯೆ,
ನಿನ್ನನ್ನು ಅಖ೦ಡವಾಗಿ ಪ್ರೀತಿಸಲು
ಸಾಲದು ಕಾಲ ಪ್ರಿಯೆ
ನಿನ್ನ ಚೆಲುವನ್ನೆಲ್ಲ ನನ್ನೊಳಗೆ
ಸ೦ಪೂರ್ಣ ತು೦ಬಿ ಕೊಳ್ಳಲು.

ಸಾಲದು ಕಾಲ ಪ್ರಿಯೆ
ನನ್ನ ವೈರಿಗಳನ್ನು ಕಟುವಾಗಿ ದ್ವೇಷಿಸಲು
ಮತ್ತವರ ಕುಹಕಗಳನ್ನು ಹತ್ತಿಕ್ಕಲು.

ಸಾಲದು ಕಾಲ ಪ್ರಿಯೆ
ನನ್ನೊಳಗೆ ಕುದಿವ ಭಾವಗಳನ್ನು
ಕಾವ್ಯದ ಪೇಯವಾಗಿಸಲು
ಅಕ್ಷರಕ್ಷರಗಳಲ್ಲಿ ತು೦ಬಿ
ಸಹೃದಯರಿಗೆ ನೀಡಲು.

ಸಾಲದು ಕಾಲ ಪ್ರಿಯೆ
ನನ್ನ ಹಸಿವುಗಳನ್ನೆಲ್ಲ ಹಿ೦ಗಿಸಲು

ಸಾಲದು ಕಾಲ ಪ್ರಿಯೆ
ನಿನ್ನನ್ನು ಅಖ೦ಡವಾಗಿ ಪ್ರೀತಿಸಲು!


-ಮೇಗರವಳ್ಳಿ ರಮೇಶ್,ಶಿವಮೊಗ್ಗ
*****

Leave a Reply

Your email address will not be published. Required fields are marked *