ಅನುದಿನ ಕವನ-೭೩೩, ಕವಿ: ಸಿದ್ದಯ್ಯ ಹಿರೇಮಠ, ಗದಗ, ಕವನದ ಶೀರ್ಷಿಕೆ:ಬಿಜ್ಜರಗಿಯ ಬಸವ…

ಬಿಜ್ಜರಗಿಯ ಬಸವ…

ಸ್ವಂತಕ್ಕೆ ಆಸೆ ಪಡದ ಸಂತ
ಈರ್ಷೆಯ ಸ್ಪರ್ಶವಿಲ್ಲದ ಮಹಾತ್ಮ
ಕಾಮ, ಕ್ರೋಧವ ಗೆದ್ದ ಮಾನವ
ಲೋಭ, ಮತ್ಸರವ ತ್ಯಜಿಸಿದ ದೇವ
ಮೋಹ, ಮದಗಳ ಮೆಟ್ಟಿದ ಮೇಧಾವಿ
ಭಕ್ತಿಭಾವ ಸ್ಫುರಿಸಿದ ಭಂಡಾರಿ
ಭಾವೈಕ್ಯವ ಸಾರಿದ ಫಕೀರ
ಭವ್ಯತೆ ಬದಿಗಿರಿಸಿದ ದಿವ್ಯಾತ್ಮ
ಅನ್ಯರ ಕಂಡು ಅಸಹ್ಯಿಸದ ಅನುಭಾವಿ
ಜ್ಞಾನ, ಯೋಗದ ಪ್ರತಿಪಾದಕ
ಪಾಮರನಂತಿದ್ದ ಪರಮಾತ್ಮ
ಪರರ ಸುಖ ಬಯಸಿದ ಪಂಡಿತ
ನಾನೆಂಬುದ ಜಯಿಸಿದ ಜ್ಞಾನಿ
ಅಜ್ಞಾನವ ಓಡಿಸಿದ ಮೌನಿ
ರಾಗ, ದ್ವೇಷಗಳ ಬದಿಗಿರಿಸಿದ ವಿರಾಗಿ
ಬಿಜ್ಜರಗಿಯಲಿ ಜನಿಸಿದ ಬಸವ


-ಸಿದ್ದಯ್ಯ ಹಿರೇಮಠ, ಗದಗ
*****

Leave a Reply

Your email address will not be published. Required fields are marked *