ವಿಜಯಪುರ: 37ನೇ ಪತ್ರಕರ್ತರ ಸಮ್ಮೇಳನದ ಮೆರವಣಿಗೆಗೆ ಶಿವಾನಂದ ತಗಡೂರು ಚಾಲನೆ

ವಿಜಯಪುರ, ಫೆ.4: ಐತಿಹಾಸಿಕ ಗುಮ್ಮಟ ನಗರಿ  ವಿಜಯಪುರದಲ್ಲಿ 37ನೇ ಪತ್ರಕರ್ತರ ಸಮ್ಮೇಳನದ ಮೆರವಣಿಗೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾಯಿತು. ಈ ಮೂಲಕ ಎರಡು ದಿನಗಳ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಚಾಲನೆ ದೊರೆಯಿತು.

ಮೆರವಣಿಗೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.                  ಅನೇಕ ವೇಷ ಭೂಷಣ ತೊಟ್ಟ ತಂಡ, ಡೊಳ್ಳು ಕುಣಿತ ತಂಡ, ಸ್ಕೌಟ್ ಮತ್ತು ಗೈಟ್ಸ್ ವಿದ್ಯಾರ್ಥಿಗಳ ತಂಡದ ಮೆರವಣಿಗೆಯೂ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗಾಂಧಿಚೌಕ್, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಕಂದಗಲ್ ಹಣಮಂತರಾಯ ರಂಗಮಂದಿರ ತಲುಪಿತು.

ಮೇರವಣಿಗೆಯಲ್ಲಿ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಪ್ರಾಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಫಲಾಜ್ ಕಲಾದಗಿ, ಶರಣು ಸಬರದ ಮತ್ತಿತರರು ಇದ್ದರು.
*****

Leave a Reply

Your email address will not be published. Required fields are marked *