ಬಳ್ಳಾರಿ: ಹಿಂದೂಸ್ಥಾನಿ ಸಂಗೀತದಲ್ಲಿ ವಿದ್ವತ್ ಪದವಿ ಪಡೆದ ಸಾಯಿಶೃತಿ


ಬಳ್ಳಾರಿ, ಮಾ. 16: ರಂಗಭೂಮಿಯ ಖ್ಯಾತ ಕಲಾವಿದ ಪುರುಷೋತ್ತಮ ಹಂದ್ಯಾಳು ಅವರ ಪುತ್ರಿ ಸಾಯಿಶೃತಿ ಹಂದ್ಯಾಳು ಅವರು ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ನಡೆದ ಪರೀಕ್ಷೆಯಲ್ಲಿ ಹಿಂದುಸ್ತಾನಿ ಸಂಗೀತದ ವಿದ್ವತ್ ಪದವಿಯ ಅಂತಿಮ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.

ಗದಗನ ಬಾಷಲ್ ಮಿಷನ್ ಹೈಸ್ಕೂಲ್ ನಲ್ಲಿ ಪರೀಕ್ಷೆ ನಡೆದಿದ್ದವು.‌ ಶಾಸ್ತ್ರ ಮತ್ತು ಪ್ರಯೋಗ ವಿಷಯಗಳಲ್ಲಿ 500 ಅಂಕಗಳಿಗೆ 438 ಅಂಕಪಡೆದಿದ್ದಾರೆ.
ಹಂಪಿ ಉತ್ಸವ, ಬಳ್ಳಾರಿ ಉತ್ಸವ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ  ಸಾಯಿಶೃತಿ ತಮ್ಮ ಸಂಗೀತ  ಪ್ರತಿಭೆಯನ್ನು ಮೆರೆದು ಗಮನ ಸೆಳೆದಿದ್ದಾಳೆ.  ಅಭಿನಂದನೆ:  ಸಂಗೀತದಲ್ಲಿ ವಿದ್ವತ್‌ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದ ಕು.ಸಾಯಿಶೃತಿ ಅವರನ್ನು ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ‌ವೇದಿಕೆ ಅಧ್ಯಕ್ಷ ಸಿ.ಮಂಜುನಾಥ್ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *