Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೮೨೦, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕಾವ್ಯ ಪ್ರಕಾರ: ಹಾಯ್ಕುಗಳು - Karnataka Kahale

ಅನುದಿನ ಕವನ-೮೨೦, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕಾವ್ಯ ಪ್ರಕಾರ: ಹಾಯ್ಕುಗಳು

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ  ಕವಿಯಿತ್ರಿ ಶೋಭ ಮಲ್ಕಿಒಡೆಯರ್ ರಚಿಸಿದ  ೧೦ ಚೆಂದದ  ಹಾಯ್ಕುಗಳು!

1.  ವಿಶ್ವ ಮಹಿಳಾ
ದಿನಾಚರಣೆಗಷ್ಟೇ
‌‌‌‌‌ ಪ್ರಚಾರ ಬೇಡಾ

2. ಅಬಲೆಯಲ್ಲ
ಸ್ತ್ರೀ ಯಾವತ್ತೂ ಸಬಲೆ
ಇರಲಿ ಬೆಲೆ

3. ಧರಿತ್ರಿಯಂತೆ
ಸಹನೆಯ ಸುಶೀಲೆ
ಗುಣಸಾಗರಿ

4. ಸಮಾಜದಲ್ಲಿ
ಹೆಣ್ಣು ಮುನ್ನಡೆಯಲು
ಬೆಂಬಲ ಬೇಕು

5. ವಾತ್ಸಲ್ಯ ಮಾತೆ
ಪ್ರೀತಿ ಮಮತೆಯಿಂದ
‌ ಪರಿಪೂರ್ಣತೆ

6. ಮನೆ ಮಕ್ಕಳು
ಜವಾಬ್ದಾರಿಯಿದ್ದಾಗ
ಸಾಗುವ ಯಾನ

7. ಶಾಂತ ಮಡಿಲು
ಸಂತೃಪ್ತಿಯ ಕಡಲು
ಸಾಕಾರ ಮೂರ್ತಿ

8. ದೀಪಾವಳಿಯ
ಬೆಳಕು ನೀ ನಗಲು
‌‌‌ ನಿತ್ಯ ಹಗಲು

9. ಬೆಳದಿಂಗಳ
ಚಂದ್ರನ ‌ ಹೋಲಿಕೆಗೆ
ವರ್ಣನೆ ಬೇಕೆ ?

10. ಹೆಣ್ಣು ಅಂದರೆ
ಮನೆ ಬೆಳಗುವಳು
‌‌ ಬೇಡಾ ಅಸೂಯೆ

-ಶೋಭಾ ಮಲ್ಕಿ ಒಡೆಯರ್,
ಹೂವಿನ ಹಡಗಲಿ