ಬಳ್ಳಾರಿ ವೀವಿ ಸಂಘದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಾಳೆ(ಏ.29) ಪ್ರಸಿದ್ಧ ಮನೋ ವೈದ್ಯ ಡಾ. ಸಿ ಆರ್ ಚಂದ್ರಶೇಖರ್ ವಿಶೇಷ ಉಪನ್ಯಾಸ

ಬಳ್ಳಾರಿ, ಏ.28:ಪ್ರಸಿದ್ಧ ಮನೋ ವೈದ್ಯ, ಸಾಹಿತಿ ಡಾ. ಸಿ ಆರ್ ಚಂದ್ರಶೇಖರ್ ಅವರು ಏ. 29ರಂದು ಶನಿವಾರ ನಗರಕ್ಕೆ ಆಗಮಿಸುತ್ತಿದ್ದಾರೆ.
ಬೆಳಿಗ್ಗೆ 10-30 ಗಂಟೆಗೆ ನಗರದ ವೀವಿ ಸಂಘದ ಸ್ವತಂತ್ರ ಪದವಿಪೂರ್ವ ಕಾಲೇಜು, ಸಂಸ್ಕೃತಿ ಪ್ರಕಾಶನ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ(ಕೆಜೆವಿಎಸ್) ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಏಳುಬೆಂಚಿ ರಾಜಶೇಖರ, ಅತಿಥಿಗಳಾಗಿ ಸದಸ್ಯರಾದ ಅಣ್ಣಾ ವಿರುಪಾಕ್ಷಪ್ಪ, ಕೆ.ಮುದ್ದನ ಗೌಡ, ಬಿ.ನಾಗರಾಜ್,  ಪ್ರಾಚಾರ್ಯ ಡಾ.‌ಕೆ ಎಂ ದೇವೇಂದ್ರಯ್ಯ, ಕೆಜೆವಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವೆಂಕಟಯ್ಯ ಅಪ್ಪಗೆರೆ ಅವರು ಉಪಸ್ಥಿತರಿರುವರು ಎಂದು ಸಂಸ್ಕೃತಿ ಪ್ರಕಾಶನದ ಸಿ.ಮಂಜುನಾಥ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *