ಬಳ್ಳಾರಿ ನಗರ ಆರ್ ಪಿ ಐ ಅಭ್ಯರ್ಥಿ ಸಿ.ಶರಣಬಸಪ್ಪ ಮತ ಯಾಚನೆ

ಬಳ್ಳಾರಿ, ಏ.2: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ – ಕರ್ನಾಟಕ ಪಕ್ಷದ ಅಭ್ಯರ್ಥಿ ಸಿ.ಶರಣಬಸಪ್ಪ ಅವರು ಮಂಗಳವಾರ ನಗರದಲ್ಲಿ ಮತ ಯಾಚಿಸಿದರು.

ನಗರದ ಡಿಎಆರ್ ಲೇನ್ ಸೇರಿದಂತೆ ಹಲವು‌ ಬಡಾವಣೆಗಳಿಗೆ ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ಭೇಟಿ ನೀಡಿ ತಮಗೆ ಮತ‌ ನೀಡುವ ಮೂಲಕ ಆಶೀರ್ವದಿಸ ಬೇಕು ಎಂದು ಮನವಿ ಮಾಡಿದರು.

ತಮ್ಮ ಕ್ರಮ ಸಂಖ್ಯೆ 10 ಆಗಿದ್ದು ಗ್ಲಾಸ್ ಟಂಬ್ಲರ್ ಗುರುತಿಗೆ ಮತ ನೀಡಲು ವಿನಂತಿಸಿದರು.
ತಮ್ಮ ಆರ್‌ಪಿ ಐ-ಕರ್ನಾಟಕ ಪಕ್ಷಕ್ಕೆ ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಪಕ್ಷಗಳು ಬೆಂಬಲ‌ ನೀಡಿವೆ ಎಂದು ಶರಣಬಸಪ್ಪ ತಿಳಿಸಿದ್ದಾರೆ.
ಸಂವಿಧಾನದ ಉಳಿವಿಗಾಗಿ, ಶೋಷಿತರು, ರೈತ ಕಾರ್ಮಿಕರ ಏಳಿಗೆಗಾಗಿ ತಮ್ಮ ಪಕ್ಷ ಶ್ರಮಿಸಲಿದೆ ಎಂದರು.
ಕರ್ನಾಟಕ ಡಿಎಸ್ ಎಸ್ (ಭೀಮವಾದ)
ಬಳ್ಳಾರಿ ಜಿಲ್ಲಾ ಸಂಚಾಲಕರಾಗಿ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದು ಶೋಷಿತರು, ಬಡವರು, ಕಾರ್ಮಿಕರ ಕಷ್ಟ ಕಾರ್ಪಣ್ಯಗಳು ತಮಗೆ ಗೊತ್ತಿದ್ದು ಈ ಸಮುದಾಯಗಳ ಏಳ್ಗೆಗೆ ಶ್ರಮಿಸುತ್ತೇನೆ ಎಂದು ಶರಣ ಬಸಪ್ಪ ಹೇಳುತ್ತಾರೆ.

 

Leave a Reply

Your email address will not be published. Required fields are marked *