ದರೋಜಿ ದೇವಲಾಪುರದ ಕಣಿವೆ ಶ್ರೀ ಮಾರೆಮ್ಮ ದೇವಸ್ಥಾನದ ಬಳಿ ಸಾರ್ವಜನಿಕ ಭೋಜನ‌ ಮಂಟಪ ಉದ್ಘಾಟನೆ: ಅಶ್ವ ರಾಮಣ್ಣ, ಪೂಜಾರಿಗಳಿಗೆ ಸನ್ಮಾನ

ಸಂಡೂರು ಮೇ 2: ತಾಲ್ಲೂಕಿನ ಹಳೇ ದರೋಜಿ ಗ್ರಾಮದ ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಹಗಲುವೇಷದ ಹಿರಿಯ ಕಲಾವಿದರಾದ, (ದಿವಂಗತ ನಾಡೋಜ ಬುರ್ರಕಥಾ ಈರಮ್ಮನ ಸಹೋದರ ) ದಿವಂಗತ ಅಶ್ವ ಬಾಲಸ್ವಾಮಿ ಮತ್ತು ಅವರ ಧರ್ಮಪತ್ನಿ ಗಾಳೆಮ್ಮ , ಸುಪುತ್ರ ಭೀಮೇಶ್ ಅವರ ಅವರ ಸ್ಮರಣಾರ್ಥವಾಗಿ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಭೋಜನ ಮಂಟಪವನ್ನು ನಿರ್ಮಿಸಲಾಗಿದೆ.


ಭೋಜನ ಮಂಟಪವನ್ನು ಬುಡ್ಗ ಜಂಗಮ ಸಮುದಾಯದ ರಾಜ್ಯ ಅಧ್ಯಕ್ಷ ಸಣ್ಣ ಮಾರೆಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಗಲುವೇಷ ಹಿರಿಯ ಕಲಾವಿದ ಅಶ್ವ ರಾಮಣ್ಣ ಮತ್ತು ಅಶ್ವ ತಿಪ್ಪೇಸ್ವಾಮಿ ಅವರು ಉದ್ವಾಟಿಸಿದರು.
ಸನ್ಮಾನ: ಭೋಜನ‌ ಮಂಟಪವನ್ನು ಸಾರ್ವಜನಿಕರಿಗಾಗಿ ನಿರ್ಮಿಸಿದ ಅಶ್ವ ರಾಮಣ್ಣ ಮತ್ತು ಶ್ರೀ ಮಾರೆಮ್ಮ ದೇವಸ್ಥಾನದ ಪೂಜಾರಿಗಳಿಗೆ ರಾಜ್ಯಾಧ್ಯಕ್ಷ ಸಣ್ಣ ಮಾರೆಪ್ಪ ಅವರು ಸನ್ಮಾನಿಸಿ ಗೌರವಿಸಿದರು.


ಈ ಸಂದರ್ಭದಲ್ಲಿ ಸಮುದಾಯದ ಕುಲ ಪಂಚಾಯಿತಿ ನ್ಯಾಯಾಧೀಶ ಗಂಗಾವತಿ ಅಶ್ವ ರಾಮಣ್ಣ , ಜಿಲ್ಲಾ ಅಧ್ಯಕ್ಷ ಮೋತಿ ಗಂಗಾಧರ, ಯುವ ಮುಖಂಡ ಮಾದನಂ ಮಾರೆಪ್ಪ . ಅಶ್ವ ದೊಡ್ಡ ಲಾಲಪ್ಪ, ಸಣ್ಣ ಲಾಲಪ್ಪ, ಅಶ್ವ ನಾಗರಾಜ, ಡಾ. ಅಶ್ವ ರಾಮು, ಅಶ್ವ ಸುರೇಶ್, ಮಾರೇಶ್ , ಆರ್.ಕೃಷ್ಣ, ಎಂ ಮಹಾಲಿಂಗ , ಎಂ ರಾಘವೇಂದ್ರ. ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು.

*****

Leave a Reply

Your email address will not be published. Required fields are marked *