ಅನುದಿನ ಕವನ-೮೭೩, ಕವಿ: ಮಹಿಮ, ಹಂದ್ಯಾಳ್ ಕವನದ ಶೀರ್ಷಿಕೆ: ಕನಸುಗಳು

ಯಾರೋ ಬೀಳಿಸುವ ಕನಸುಗಳು
ಬಹು ಸುಂದರ
ಮನೋಹರ

ಅಂತಹ ಕನಸುಗಳನೆಂದೂ
ನೆಚ್ಚಬೇಡ
ನೆಚ್ಚಿ ಕೂರಬೇಡ

ಹುಚ್ಚು ಹಿಡಿಸಲು
ನಿನಗೆ
ಬೀಳಿಸುವರು ಕನಸುಗಳ
ದಾರಿ ತಪ್ಪಿಸುವರು

ಇನ್ನೊಬ್ಬರು ಬೀಳಿಸುವ ಕನಸುಗಳು
ನಿನಗೆ ಬೀಳುವ ಕನಸುಗಳಿಗಿಂತ
ಬಹು ಸುಂದರ

ಬೇಡವೇ ಬೇಡ
ನಂಬ ಬೇಡ
ಯಾರ ಕನಸುಗಳ
ಅವರ ಕನಸುಗಳಿಗೆ
ಬಲಿಯಾಗಿ
ಬದುಕ ಕೆಡಿಸಿಕೊಳ್ಳಬೇಡ
ನಿನ್ನ ಕನಸುಗಳು ನಿನಗೇ ಇರಲಿ


-ಮಹಿಮ, ಹಂದ್ಯಾಳ್
*****

Leave a Reply

Your email address will not be published. Required fields are marked *