ಅನುದಿನ ಕವನ-೮೮೩, ಕವಿಯಿತ್ರಿ: ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ, ಕವನದ ಶೀರ್ಷಿಕೆ: ಪ್ರೀತಿಯ ಜೀವನ

ಪ್ರೀತಿಯ ಜೀವನ

ಚೆಲುವಿನ ಚಿಲುಮೆ ಎನ್ನರಸಿ
ಬಂದಿರುವೆ ನಾನು ನಿನ್ನರಸಿ
ಮನದ ತುಂಬೆಲ್ಲಾ ತುಂಬಿರುವೆ
ಎಂದಿಗೂ ನಿನ್ನ ಜೊತೆ ಇರುವೆ

ನೀನಾಡೋ ಮಾತುಗಳೆಲ್ಲ ಸುಂದರ
ನಿನ್ನ ನಗುವು ಹುಣ್ಣಿಮೆಯ ಚಂದಿರ
ನೀ ಬಂದು ನನ್ನ ಬದುಕು ಬಂಗಾರ
ನಿನ್ನಿಂದ ನನ್ನ ಜೀವನ ಸಿಂಗಾರ

ಬದುಕಿನ ತಿರುಳನು ಅರಿತಿರುವೆವು
ಬಾಳಾ ಕೊಂಡಿಯ ಬೆಸೆದಿರುವೆವು
ಜೀವನದ ಮೌಲ್ಯವ ತಿಳಿದಿರುವೆವು
ಅರಿತು ಬೆರೆತು ಸುಖದಿ ಬಾಳುವೆವು

ಹೊಂದಾಣಿಕೆ ಇದ್ದರೆ ಜೀವನದಿ
ಉರುಳುವುದು ದಿನಗಳು ಸಂತಸದಿ
ಮಧುರ ಕ್ಷಣಗಳ ನೆನಪು ಮನದಿ
ಇರಲು ಒಳಿತು ಕೊನೆಯ ಸಮಯದಿ

                    -ಡಾ. ವಾಣಿಶ್ರೀ ಕಾಸರಗೋಡು,  ಗಡಿನಾಡ ಕನ್ನಡತಿ

Leave a Reply

Your email address will not be published. Required fields are marked *