Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ‌ ಕವನ-೯೩೫, ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ, [ಡಿಜಿಟಲ್ ಚಿತ್ರ ಕೃಪೆ: ಯಜ್ಞ ಆಚಾರ್ಯ, ಮಂಗಳೂರು] - Karnataka Kahale

ಅನುದಿನ‌ ಕವನ-೯೩೫, ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ, [ಡಿಜಿಟಲ್ ಚಿತ್ರ ಕೃಪೆ: ಯಜ್ಞ ಆಚಾರ್ಯ, ಮಂಗಳೂರು]

ಸುಮ್ಮನೆ ನಿಂತು
ಎನ್ನೆದೆಯ ಮೇಲೆ ಕೈಯಿಟ್ಟಾಗ
ಅಂತರಾಳದ ಬಾಗಿಲು ತೆರೆಯಿತು
* * *
ಮಳೆ ನಿಂತ ಮೇಲೆ ಎಲೆಗಳ
ಮರೆಯಿಂದ ಹನಿ ಉದುರುವಾಗ
ನನ್ನ ಭೂತದ ನೆನಪು ಮರುಕಳಿಸಿತು
* * *
ಬೇಸಿಗೆ ಉರಿಬಿಸಿಲಲ್ಲಿ
ಕೋಗಿಲೆಯ ಕುಹೂ ಆಲಿಸಿ
ನೀರಡಿಸಿದ ಮನ ತಂಪಾಯಿತು
* * *
ಉದಯದಲಿ ಅರಳಿದ ಮೊಗ್ಗು
ಸಂಧ್ಯೆಯಲಿ ಮುದುಡಿದಾಗ
ನನ್ನೆದೆಯಲೇನೋ ತಳಮಳ
* * *
ಇಂದೇ ನಿರ್ಮಿಸಿದ ಚಂದದ ರಸ್ತೆಗೆ
ಸಂಜೆಯಲಿ ಕೆಂಪು ಕೆಂಪಿನ ಚಿತ್ತಾರ


-ಅರುಣಕುಮಾರ ಹಬ್ಬು, ಹುಬ್ಬಳ್ಳಿ